ಬೆಂಗಳೂರಿಗರೇ ಮತ್ತೆ ಟ್ರಾಫಿಕ್ ಸಮಸ್ಯೆ ಎದುರಿಸಲು ರೆಡಿಯಾಗಿ..!

ಈ ಸುದ್ದಿಯನ್ನು ಶೇರ್ ಮಾಡಿ

white-tapping-road-and-Traf

ಬೆಂಗಳೂರು,ಆ.25- ನಗರದ ನಾಗರಿಕರೇ ಮತ್ತೆ ಟ್ರಾಫಿಕ್‍ಜಾಮ್ ಸಮಸ್ಯೆ ಎದುರಿಸಲು ಸಿದ್ಧರಾಗಿ…  ನಗರದಲ್ಲಿ ಇತ್ತೀಚೆಗಷ್ಟೇ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಕಾಮಗಾರಿ ಮತ್ತೆ ಪ್ರಾರಂಭವಾಗಲಿದ್ದು, ನಗರದ ಜನತೆಗೆ ಟ್ರಾಫಿಕ್ ಕಿರಿಕಿರಿ ತಟ್ಟಲಿದೆ.  ಇದೇ 27ರಿಂದ ವೈಟ್‍ಟಾಪಿಂಗ್ ಕಾಮಗಾರಿ ಶುರುವಾಗಲಿದೆ. ನಾಯಂಡಹಳ್ಳಿ-ಸುಮನಹಳ್ಳಿ , ಹೆಬ್ಬಾಳ-ಹೆಣ್ಣೂರು ರಸ್ತೆ, ರಾಜಕುಮಾರ್ ಸ್ಮಾರಕ-ಸುಮನಹಳ್ಳಿ, ವೆಸ್ಟ್ ಆಫ್ ಕಾರ್ಡ್‍ರೋಡ್-ಟೋಲ್ಗೇಟ್‍ವರೆಗೆ ಕಾಮಗಾರಿ ನಡೆಯಲಿದೆ.

95 ಕಿ.ಮೀಗೆ ವೈಟ್ ಟಾಪಿಂಗ್ ಮಾಡಲು ಟೆಂಡರ್ ಆಗಿತ್ತು. ಇದಕ್ಕೆ ಇದರಲ್ಲಿ ಕೇವಲ 15 ಕಿ.ಮೀವರೆಗೆ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಸಂಚಾರಿ ಪೊಲೀಸರು ಅನುಮತಿ ಕೊಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಅನುಮತಿ ದೊರೆತಿದ್ದು, ಬಾಕಿ ಉಳಿದಿರುವ ವೈಟ್‍ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಿದೆ. ಡಾ.ಜಿ.ಪರಮೇಶ್ವರ್ ಅವರು ಗೃಹ ಮತ್ತು ನಗರಾಭಿವೃದ್ದಿ ಸಚಿವರು ಆಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರಿಂದ ಈ ಕಾಮಗಾರಿಗೆ ಅನುಮತಿ ದೊರೆತಿದೆ. ಇನ್ನು ಒಂದೆರಡು ದಿನದಲ್ಲೇ ಕಾಮಗಾರಿ ಪ್ರಾರಂಭವಾಗಲಿದ್ದು, ಸಂಚಾರಿ ದಟ್ಟಣೆ ಹೆಚ್ಚಾಗಿ ನಗರದ ಜನತೆಗೆ ಕಿರಿಕಿರಿ ಗ್ಯಾರಂಟಿ.

Facebook Comments