ಕೊಪ್ಪದಲ್ಲಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01

ಚಿಕ್ಕಮಗಳೂರು, ಆ.25- ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೋಗ್ರೆ, ಅಬ್ಬಿಕಲ್ಲು ಗ್ರಾಮದ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಬೆಚ್ಚಿಬಿದ್ದಿದ್ದಾರೆ. ಭೂಮಿ ಒಳಗಿನಿಂದ ಭಾರೀ ಸ್ಫೋಟದ ಶಬ್ದ ಕೇಳಿಬಂದಿದೆ. ಜನ ಆತಂಕಕ್ಕೊಳಗಾಗಿದ್ದಾರೆ. ಕಳೆದ 10 ದಿನಗಳ ಹಿಂದೆಯೂ ಕೂಡ ಇಂತಹದ್ದೇ ಭಾರೀ ಪ್ರಮಾಣದ ಶಬ್ದ ಕೇಳಿಬಂದಿತ್ತು. ಇಲ್ಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದರಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಂದು ಕೂಡ ಭಾರೀ ಸ್ಫೋಟದ ಶಬ್ದ ಕೇಳಿಬರುವುದರ ಜತೆಗೆ ಭೂಮಿ ಕಂಪಿಸಿದ್ದರಿಂದ ಜನ ಭೀತಿಗೊಳಗಾಗಿದ್ದಾರೆ.

ಕೊಪ್ಪ ತಾಲೂಕಿನ ಗ್ರಾಮಗಳಿಗೆಲ್ಲ ಈ ಶಬ್ದ ಕೇಳಿಸಿದ್ದು, ಕಾರಣ ಮಾತ್ರ ತಿಳಿದಿಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಜನ ಭಯಭೀತಿಗೊಳಗಾಗಿದ್ದಾರೆ.  ಕೊಡಗಿನಲ್ಲಿ ಮಳೆಯಿಂದ ಗುಡ್ಡ ಕುಸಿತ ಪ್ರಕರಣಗಳು ನಡೆದು ಭಾರೀ ಅನಾಹುತಗಳು ಸಂಭವಿಸಿವೆ. ಚಿಕ್ಕಮಗಳೂರು, ಸಕಲೇಶಪುರ ಮುಂತಾದ ಕಡೆ ಮಳೆಯಿಂದ ಹಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಈ ಸಂದರ್ಭದಲ್ಲಿ ಭೂಮಿಯ ಒಳಗಿಂದ ಭಾರೀ ಪ್ರಮಾಣದ ಸದ್ದು ಕೇಳಿಬಂದು ಕಂಪನ ಉಂಟಾಗಿರುವುದರಿಂದ ಜನರು ಆತಂಕಕ್ಕೀಡಾಗಿದ್ದಾರೆ

Facebook Comments

Sri Raghav

Admin