ಕುದುರೆ ಜಿಗಿತದಲ್ಲಿ ಭಾರತಕ್ಕೆ 2 ಬೆಳ್ಳಿ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

Horse--01

ಜಕಾರ್ತ, ಆ. 26(ಪಿಟಿಐ)- ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೆ ಏಷ್ಯಾನ್ ಕ್ರೀಡಾಕೂಟದ ಈಕ್ವೆನ್‍ಟ್ರೈಯನ್ ಜಂಪಿಂಗ್( ಕುದುರೆ ಜಿಗಿತ) ಭಾರತಕ್ಕೆ 2 ಬೆಳ್ಳಿ ಪದಕ ಲಭಿಸಿದೆ.  ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಫೌಹಾದ್ ಮಿರ್ಜಾಗೆ ಬೆಳ್ಳಿ ಪದಕ ಲಭಿಸಿದರೆ, ಗುಂಪು ವಿಭಾಗದಲ್ಲಿ ಮಿರ್ಜಾ, ರಾಕೇಶ್‍ಕುಮಾರ್, ಅಶೀಸ್ ಮಲ್ಲಿಕ್ ಹಾಗೂ ಜೀತೇಂದ್ರಸಿಂಗ್ ತಂಡವು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 7 ಚಿನ್ನ, 7 ಬೆಳ್ಳಿ, 17 ಕಂಚು ಪದಕಗಳನ್ನು ಗೆದ್ದಿರುವ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ 9ನೆ ಸ್ಥಾನದಲ್ಲಿದೆ.

Facebook Comments

Sri Raghav

Admin