ಬಿಜೆಪಿಯನ್ನು ಮಣಿಸಲು ವಿಪಕ್ಷಗಳ ಸದೃಢ ಮೈತ್ರಿ ಅಗತ್ಯ : ಚಿದಂಬರಂ

ಈ ಸುದ್ದಿಯನ್ನು ಶೇರ್ ಮಾಡಿ

Chidambaram--01

ಕೋಲ್ಕತಾ, ಆ.26-ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧಪಕ್ಷಗಳ ಸದೃಢ ಮೈತ್ರಿ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಪಿ. ಚಿದಂಬರಂ ಹೇಳಿದ್ದಾರೆ. 2019ರಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ಪ್ರತಿಪಕ್ಷಗಳ ಬಲವಾದ ಮೈತ್ರಿಯನ್ನು ಹೆಣೆಯಬಹುದು ಹಾಗೂ ದೇಶವನ್ನು ಆತಂಕದಿಂದ ಮುಕ್ತಗೊಳಿಸಬಹುದು ಎಂದು ವಿಶ್ಲೇಷಿಸಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ಮೈತ್ರಿಕೂಟದ ನಾಯಕತ್ವದ ಬಗ್ಗೆ ಅಥವಾ ವಿರೋಧಪಕ್ಷಗಳ ಮೈತ್ರಿಯ ಪ್ರಧಾನಮಂತ್ರಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಇದರೊಂದು ಅಪಕ್ವ ಪ್ರಶ್ನೆ ಎಂದಷ್ಟೇ ಪ್ರತಿಕ್ರಿಯಿಸಿದರು.  ಮೊದಲು ಸದೃಢ ಮೈತ್ರಿಕೂಟ ರಚನೆಯಾಗಲಿ ಹಾಗೂ ಚುನಾವಣೆ ನಡೆಯಲಿ. ಸ್ಕ್ರಿಪ್ಟ್ ರಚನೆಗೆ ಮುನ್ನವೇ ಉತ್ತರ ತಿಳಿಯಬೇಕೆಂಬುದು ನಿಮ್ಮೆಲ್ಲರ ಬಯಕೆಯಾಗಿದೆ. ಆದರೆ ಈ ಪ್ರಶ್ನೆಗೆ ಈಗ ಉತ್ತರ ನೀಡುವುದು ಅಪಕ್ವವಾಗುತ್ತದೆ ಎಂದು ಚಿದು ಹೇಳಿದರು.

ಬಿಜೆಪಿಯನ್ನು ಸೋಲಿಸಬೇಕೆಂಬುದೇ ಎಲ್ಲ ಪಕ್ಷಗಳು ಒಪ್ಪುತ್ತವೆ. ಹೀಗಾಗಿ ಇದೊಂದು ಅತಿ ಮುಖ್ಯವಾದ ವಿಚಾರ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಈ ಬಗ್ಗೆ ಒಮ್ಮತಾಭಿಪ್ರಾಯವಿದೆ. ಈ ಒಮ್ಮತಾಭಿಪ್ರಾಯವು ರಾಜ್ಯವಾರು ವಿರೋಧ ಪಕ್ಷಗಳು ಹಾಗೂ ಮೈತ್ರಿಕೂಟಗಳನ್ನು ಒಗ್ಗೂಡಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin