ವಿಯೆಟ್ನಾಂ ವಾರ್ ಹೀರೋ ಜಾನ್ ಮ್ಯಾಕ್‍ಕೈನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Hero--01

ನ್ಯೂಯಾರ್ಕ್ (ಪಿಟಿಐ), ಆ.26-ಅಮೆರಿಕದ ಖ್ಯಾತ ರಾಜಕೀಯ ನಾಯಕ, ಸಂಸದ ಹಾಗೂ ವಿಯೆಟ್ನಾಂ ವಾರ್ ಹೀರೋ ಜಾನ್ ಮ್ಯಾಕ್‍ಕೈನ್ ಇಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಆರಿಜೋನಾ ಪ್ರಾಂತ್ಯದಲ್ಲಿ ಅವರು ಕೊನೆಯುಸಿರೆಳೆದರು.   ಅವರು ಒಬ್ಬ ಪುತ್ರ ಹಾಗೂ ಅಮೆರಿಕ ನೌಕಾ ಪಡೆಯ ಅತ್ಯುನ್ನತ ಅಧಿಕಾರಿಯಾಗಿರುವ ಮೊಮ್ಮಗನನ್ನು ಅಗಲಿದ್ದಾರೆ.

ಕಳೆದ ವರ್ಷ ಅವರಿಗೆ ತೀವ್ರ ಮೆದುಳು ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. 2017ರಿಂದಲೂ ಅವರು ವಿಕಿರಣ ಮತ್ತು ಕೆಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು.
ಅಮೆರಿಕದ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಅವರು, ಎರಡು ಬಾರಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ವಿಯೆಟ್ನಾಂ ಯುದ್ದದ ವೇಳೆ ಅಮೆರಿಕ ನೌಕಾಪಡೆಯ ಅಧಿಕಾರಿಯಾಗಿದ್ದ ಅವರು ಸಮರ ಕೈದಿಯಾಗಿ ಜೈಲು ಶಿಕ್ಷೆ ಮತ್ತು ಚಿತ್ರಹಿಂಸೆ ಅನುಭವಿಸಿದ್ದರು.

ಸೆನೆಟರ್ ಜಾನ್ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬಿಲ್ ಕ್ಲಿಂಟನ್ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin