ಮನ್ ಕೀ ಬಾತ್’ನಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆ ಸ್ಮರಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Sir-M-Vishweshwaraia--014

ನವದೆಹಲಿ (ಪಿಟಿಐ), ಆ.26-ದೇಶದ ಕಂಡ ಮಹಾನ್ ತಂತ್ರಜ್ಞಾನ ಶಿಲ್ಪಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸೇವೆ ಮತ್ತು ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.   ಪ್ರತಿ ತಿಂಗಳ ಕೊನೆ ಭಾನುವಾರದ ಮನ್ ಕೀ ಬಾತ್ ಬಾನುಲಿ ಭಾಷಣದಲ್ಲಿ ಸರ್ ಎಂವಿ ಅವರನ್ನು ಸ್ಮರಿಸಿದ ಮೋದಿ, ಅವರು ಭಾರತದ ಅಗ್ರಮಾನ್ಯ ಎಂಜಿನಿಯರ್ ಆಗಿ ಅಪಾರ ಗೌರವ ಹೊಂದಿದ್ದಾರೆ. ಅವರ ಸಾಧನೆ ಸ್ಮರಣೀಯ. ಕಾವೇರಿ ನದಿಗೆ ಅಡ್ಡಲಾಗಿ ವಿಶ್ವೇಶ್ವರಯ್ಯನವರು ಅಣೆಕಟ್ಟು ನಿರ್ಮಿಸಿ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಸರ್ ಎಂವಿ ಅವರ ಗೌರವಾರ್ಥ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ಎಂಜಿನಿಯರ್‍ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ದಿನವನ್ನು ಎಲ್ಲ ಎಂಜಿನಿಯರ್‍ಗಳು ಆಚರಿಸಬೇಕು ಎಂದು ಮೋದಿ ಹೇಳಿದರು.

Facebook Comments

Sri Raghav

Admin