ಹುತಾತ್ಮ ಯೋಧರ ಪ್ರತಿಮೆಗಳಿಗೆ ರಾಖಿ ಕಟ್ಟಿದ ಸಹೋದರಿಯರು..!

ಈ ಸುದ್ದಿಯನ್ನು ಶೇರ್ ಮಾಡಿ

Rakhi--01

ರಾಯ್‍ಪುರ್ (ಪಿಟಿಐ), ಆ.26-ಸೋದರ-ಸಹೋದರಿಯರ ಸುಮಧುರ ಬಾಂಧ್ಯವ ಧ್ಯೋತಕವಾದ ರಕ್ಷಾಬಂಧನ್‍ನನ್ನು ಇಂದು ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರೀತಿಯ ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿ ಸಿಹಿ ತಿನ್ನಿಸಿ ಒಳಿತಿಗಾಗಿ ಹಾರೈಸುತ್ತಾರೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಹುತಾತ್ಮರಾದ (ಕರ್ತವ್ಯಕ್ಕಾಗಿ ಮಡಿದ ಯೋಧರು ಮತ್ತು ಪೊಲೀಸರು) ಅಣ್ಣ-ತಮ್ಮಂದಿರ ಪ್ರತಿಮೆಗಳಿಗೆ ರಾಖಿಗಳನ್ನು ಕಟ್ಟಿ ಸಹೋದರಿಯರು ನೋವಿನಿಂದ ಈ ಆಚರಣೆ ಮಾಡಿದ್ದಾರೆ.

ಛತ್ತೀಸ್‍ಗಢದ ನಕ್ಸಲ್‍ಪೀಡಿತ ಸುಕ್ಮಾ ಜಿಲ್ಲೆಯ ತೊಂಗಪಾಲ್ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ನಕ್ಸಲರ ಗುಂಡಿಗೆ ಬಲಿಯಾದರು. ಈ ಘಟನೆ ನಡೆದಿದ್ದು 2014ರಲ್ಲಿ. ತನ್ನ ಪ್ರೀತಿಯ ಅಣ್ಣ ಹುತಾತ್ಮನಾದ ಸುದ್ದಿ ತಂಗಿಗೆ ಬರಸಿಡಿಲಿನಂತೆ ಬಡಿಯಿತು. ಪ್ರತಿ ವರ್ಷ ತಪ್ಪದೇ ಅಣ್ಣನಿಗೆ ರಕ್ಷಾ ಬಂಧನ್ ಕಟ್ಟಿ ಸಿಹಿ ತಿನಿಸಿ ಆಶೀರ್ವಾದ ಪಡೆಯುತ್ತಿದ್ದ ತಂಗಿ ಅತೀವ ದು:ಖತಪ್ತಳಾದಳು. ಆದರೆ ಆಕೆ ಕಳೆದ ನಾಲ್ಕು ವರ್ಷಗಳಿಂದ ರಾಖಿ ಕಟ್ಟುವುದನ್ನು ಮಾತ್ರ ನಿಲ್ಲಿಸಿಲ್ಲ.

ತನ್ನ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ, ಹುತ್ಮಾತ ಯೋಧನಾದ ಅಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಕ್ಷಾಬಂಧನವನ್ನು ನೋವಿನಿಂದ ಆಚರಿಸಿದಳು. ಸಹೋದರ-ಸಹೋದರಿಯರ ಸುಮಧುರ ಬಾಂಧವ್ಯಕ್ಕೆ ಸಾಕ್ಷಿಯಾದ ಹಲವು ಘಟನೆಗಳು ಇಂದು ದೇಶದ ವಿವಿಧೆಡೆ ನಡೆದಿವೆ. ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಯೋಧರು ಮತ್ತು ಪೊಲೀಸರು ಪ್ರತಿಮೆಗಳಿಗೆ ಸಹೋದರಿಯರು ಮತ್ತು ಮಹಿಳೆಯರು ರಾಖಿ ಕಟ್ಟಿ ಅವರ ಕರ್ತವ್ಯ ನಿಷ್ಠೆಯನ್ನು ಸ್ಮರಿಸಿದ್ದಾರೆ.

Facebook Comments

Sri Raghav

Admin