ಖಲಿಸ್ತಾನ ಬೆಂಬಲಿಗರಿಂದ ಸಿಖ್ ಮುಖಂಡನ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Khalistan--01

ನ್ಯೂಯಾರ್ಕ್, ಆ.26-ವಿವಿಧ ದೇಶಗಳಲ್ಲಿರುವ ಖಲಿಸ್ತಾನ್ ಬೆಂಬಲಿಗರ ಹಿಂಸಾಚಾರ ಮುಂದುವರಿದಿದೆ. ದೆಹಲಿ ಸಿಖ್ ಗುರುದ್ವಾರ್ ನಿರ್ವಹಣಾ ಸಮಿತಿ(ಡಿಎಸ್‍ಜಿಎಂಸಿ) ಅಧ್ಯಕ್ಷ ಮಂಜೀತ್ ಸಿಂಗ್ ಅವರ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಖಲಿಸ್ತಾನ್ ಪರ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಸಿಂಗ್ ಮತ್ತು ಅವರ ಸಹಾಯಕನಿಗೆ ಗಾಯಗಳಾಗಿವೆ.  ಲಂಡನ್‍ನಲ್ಲಿ ನಡೆದ ರಾಹುಲ್ ಗಾಂಧಿ ಸಭೈಗೆ ನುಗ್ಗಿ ಖಲಿಸ್ತಾನ್ ಬೆಂಬಲಿಗರು ಅಡ್ಡಿಪಡಿಸಲು ಯತ್ನಿಸಿದ ಸಂದರ್ಭದಲ್ಲೇ ಅಮೆರಿಕದಲ್ಲಿ ಈ ಘಟನೆ ನಡೆದಿದೆ.

ಸಿಖ್ ಮಹಾಸಂತ ಗುರುನಾನಕ್ ಅವರ 550ನೇ ಜನ್ಮ ಜಯಂತಿ ಆಚರಣೆ ಪ್ರಯುಕ್ತ ಅಮೆರಿಕದಲ್ಲಿರುವ ಸಮುದಾಯದವರೊಂದಿಗೆ ಚರ್ಚಿಸಿ ನ್ಯೂಯಾರ್ಕ್‍ನಿಂದ ಕ್ಯಾಲಿಫೋರ್ನಿಯಾಗೆ ಸಿಂಗ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.  ಶಿರೋಮಣಿ ಅಕಾಲಿ ದಳ್(ಎಸ್‍ಎಡಿ) ಮುಖಂಡನ ಮೇಲೆ ನಡೆದ ಎರಡನೇ ಹಲ್ಲೆ ಪ್ರಕರಣ ಇದಾಗಿದೆ. ಈ ಹಿಂದೆಯೂ ಅವರ ಮೇಲೆ ನ್ಯೂಯಾರ್ಕ್‍ನಲ್ಲಿ ಹಲ್ಲೆ ನಡೆದಿತ್ತು.

Facebook Comments

Sri Raghav

Admin