ಕರುಣಾನಿಧಿ ಸಂತಾಪ ಸೂಚಕ ಸಭೆಗೆ ಅಮಿತ್ ಶಾಗೆ ಆಹ್ವಾನ, ಡಿಎಂಕೆ-ಬಿಜೆಪಿ ಮಧ್ಯೆ ಮೈತ್ರಿ..?

ಈ ಸುದ್ದಿಯನ್ನು ಶೇರ್ ಮಾಡಿ

Stalklin--01

ಚೆನ್ನೈ (ಪಿಟಿಐ), ಆ.26- ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಡಾ. ಎಂ. ಕರುಣಾನಿಧಿ ಅವರ ನಿಧನ ಹಿನ್ನೆಲೆಯಲ್ಲಿ ಆಗಸ್ಟ್ 30ರಂದು ಆಯೋಜಿಸಿರುವ ಸಂತಾಪ ಸೂಚಕ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿದ್ದು, ಎರಡೂ ಪಕ್ಷಗಳ ನಡುವೆ ಮೈತ್ರಿ ಸಾಧ್ಯತೆಯ ಊಹಾಪೂಹಗಳು ಕೇಳಿಬರುತ್ತಿವೆ.  ಕೇಂದ್ರದ ಮಾಜಿ ಸಚಿವ ಹಾಗೂ ಡಿಎಂಕೆ ಮುಖಂಡ ಟಿ.ಆರ್.ಬಾಲು ಅವರು ಖುದ್ದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕರುಣಾನಿಧಿ ಅವರ ಸಂತಾಪ ಸೂಚಕ ಸಭೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ಶಾ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿದ್ದು, ಇದು ಉಭಯ ಪಕ್ಷಗಳ ಮೈತ್ರಿಗೆ ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Amit

ಈ ಮಧ್ಯೆ, ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ವೆಲ್ಲೂರಿಗೆ ಬಂದಿದ್ದಾಗ ಅಲ್ಲಿಗೆ ತೆರಳಿ ಗೌರವ ಸಮರ್ಪಿಸಿದ್ದರು. ಅದೇ ರೀತಿ ಮಾಜಿ ಸಚಿವ ಹಾಗೂ ಡಿಎಂಕೆ ಮತ್ತೊಬ್ಬ ಮುಖಂಡ ಕೆ.ಪಿಚಾಂಡಿ ಅವರು ತಿರುವಣ್ಣಾಮಲೈನಲ್ಲಿ ವಾಜಪೇಯಿ ಅಸ್ಥಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದರು.  ಕರುಣಾನಿಧಿ ಅವರ ಸಂತಾಪ ಸೂಚಕ ಸಭೆಗೆ ಅಮಿತ್ ಶಾ ಅವರು ಭಾಗವಹಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ.

Facebook Comments

Sri Raghav

Admin