ಏಷ್ಯನ್ ಗೇಮ್ಸ್ : ಶಾಟ್ ಪುಟ್’ನಲ್ಲಿ ತಾಜೀಂದರ್ ಪಾಲ್ ಸಿಂಗ್’ಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Sing---01

ಜಕಾರ್ತ, ಆ.26: ಭಾರತದ ತಾಜೀಂದರ್ ಪಾಲ್ ಸಿಂಗ್ ಅವರು ಏಶ್ಯನ್ ಗೇಮ್ಸ್ ನ ಪುರುಷರ ಶಾಟ್ ಪುಟ್ ನಲ್ಲಿ ಚಿನ್ನ ಬಾಚಿಕೊಂಡಿದ್ದಾರೆ. ತಾಜೀಂದರ್ ಪಾಲ್ ಸಿಂಗ್ 20.75 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ಏಶ್ಯನ್ ಗೇಮ್ಸ್ ನಲ್ಲಿ ನೂತನ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಐದನೇ ಪ್ರಯತ್ನದಲ್ಲಿ ತಾಜೀಂದರ್ ಪಾಲ್ ಸಿಂಗ್ ಚಿನ್ನ ಪಡೆದರು. ಇದು ಭಾರತಕ್ಕೆ ಕೂಟದ 7ನೇ ದಿನ ದೊರೆತ ಮೊದಲ ಚಿನ್ನದ ಪದಕವಾಗಿದೆ.

ತೇಜಿಂದರ್‌ಪಾಲ್ ಸಿಂಗ್ ಈ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಓಂ ಪ್ರಕಾಶ್ ಕರ್ಹಾನ 20.69 ಮೀ. ಸಾಧನೆಯೊಂದಿಗೆ 6 ವರ್ಷಗಳ ಹಿಂದೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.  ಕೂಟದಲ್ಲಿ ತೇಜಿಂದರ್‌ಪಾಲ್ ಸಿಂಗ್ ಮೊದಲ ಸ್ಥಾನದೊಂದಿಗೆ ಚಿನ್ನ ಪಡೆದರೆ, ಚೀನಾದ ಲಿಯು ಯಾಂಗ್ (19.52 ಮೀ.) ಎರಡನೇ ಸ್ಥಾನದೊಂದಿಗೆ ಬೆಳ್ಳಿ ಮತ್ತು ಕಝಕಿಸ್ತಾನದ ಐವಾನ್ ಐವಾನೊವ್ (19.40 ಮೀ.) ಕಂಚು ತಮ್ಮದಾಗಿಸಿಕೊಂಡರು.

2010ರಲ್ಲಿ ಗುವಾಂಗ್‌ರೊ ಏಶ್ಯನ್ ಗೇಮ್ಸ್‌ನಲ್ಲಿ ಸೌದಿ ಅರೇಬಿಯಾದ ಸುಲ್ತಾನ್ ಅಬ್ದುಲ್‌ಮಜೀದ್ ಇ ಅಲಾಬಾಶಿ 20.57 ಮೀ. ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದರು. ಇದು ಏಶ್ಯನ್ ಗೇಮ್ಸ್ ನಲ್ಲಿ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಈ ದಾಖಲೆಯನ್ನು ತೇಜಿಂದರ್‌ಪಾಲ್ ಮುರಿದಿದ್ದಾರೆ. ಏಶ್ಯನ್ ಗೇಮ್ಸ್‌ನ ಇತಿಹಾಸದಲ್ಲೇ ನೂತನ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದರು.

Facebook Comments

Sri Raghav

Admin