ರೈಲಿಗೆ ಸಿಲುಕಿ ತುಂಡಾದ ಮಹಿಳೆಯ ಕೈ ಎಳೆದೊಯ್ದ ನಾಯಿ, ಮಾನವೀಯತೆ ಮರೆತ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

Women--01
ಚಿಕ್ಕಬಳ್ಳಾಪುರ, ಆ.26- ಹಳಿ ದಾಟುವಾಗ ರೈಲಿಗೆ ಸಿಲುಕಿ ಮಹಿಳೆಯೊಬ್ಬರ ಕೈ ಕತ್ತರಿಸಿ ನರಳಾಡುತ್ತಿದ್ದರೆ, ನಾಯಿಗಳು ತುಂಡಾದ ಕೈಯನ್ನು ಎಳೆದೊಯ್ಯುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮಾತ್ರ ಫೋಟೋ ಕ್ಲಿಕ್ಕಿಸುತ್ತಿದ್ದರೇ ಹೊರತು ಆಕೆಯ ಸಹಾಯಕ್ಕೆ ಯಾರೂ ಬಾರದೇ ಹೋದದ್ದು ನಾಗರಿಕರಲ್ಲಿ ಮಾನವೀಯತೆಯೇ ಮಾಯವಾಗಿದೆಯೇನೋ ಅನ್ನಿಸುತ್ತಿತ್ತು.

ಹೀಗೊಂದು ಘಟನೆ ನಡೆದಿದ್ದು ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಮಿಟಗಾನಹಳ್ಳಿ ಬಳಿ. ಮಹಿಳೆಯೊಬ್ಬರು ರೈಲ್ವೆ ಹಳಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದು, ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ರೈಲು ಮಹಿಳೆಯ ಕೈ ಮೇಲೆ ಹರಿದಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಕೈ ಮಾತ್ರ ಕತ್ತರಿಸಿ ಹೋಗಿದೆ. ಹೇಗೋ ಜೀವ ಉಳಿಯಿತಲ್ಲ ಅಂಥ ಮಹಿಳೆ ನರಳಾಡುತ್ತಿದ್ದರೆ, ಆಕೆಯ ನರಳಾಟದ ದೃಶ್ಯವನ್ನು ಮಾನವೀಯತೆ ಮರೆತ ಸಾರ್ವಜನಿಕರು ವೀಡಿಯೋ ಹಾಗೂ ಫೋಟೋ ಕ್ಲಿಕ್ಕಿಸುತ್ತಿದ್ದರೆ ಹೊರತು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾತ್ರ ಯಾರೂ ಮಾಡಲಿಲ್ಲ.
ಮತ್ತೊಂದು ಕಡೆ ತುಂಡಾದ ಮಹಿಳೆಯ ಕೈಯನ್ನು ನಾಯಿಗಳು ಎಳೆದೊಯ್ಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Facebook Comments

Sri Raghav

Admin