ಬಲ್ಗೇರಿಯಾದಲ್ಲಿ ಬಸ್ ಉರುಳಿ ಬಿದ್ದು 15 ಪ್ರವಾಸಿಗರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Balgaria--01

ಸೋಫಿಯಾ (ಪಿಟಿಐ), ಆ.26- ಪ್ರವಾಸಿಗರಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 15 ಮಂದಿ ಮೃತಪಟ್ಟು ಇತರ 27 ಜನರು ಗಾಯಗೊಂಡಿರುವ ಘಟನೆ ಪರ್ಶಚಿಮ ಬಲ್ಗೇರಿಯಾದಲ್ಲಿ ನಿನ್ನೆ ಸಂಜೆ ಸಂಭವಿಸಿದೆ.   ಪ್ರವಾಸಿ ಬಸ್ ರಸ್ತೆ ಬದಿ ಉರುಳಿ ಬಿದ್ದ ಕಾರಣ ಇತರ ನಾಲ್ಕು ಕಾರುಗಳಿಗೂ ಹಾನಿಯಾಗಿದೆ.

ಸ್ಮಾರಕವೊಂದರ ವೀಕ್ಷಣೆಗಾಗಿ ತೆರಳುತ್ತಿದ್ದ ಪ್ರವಾಸಿಗರಿದ್ದ ಕೋಚ್ ಬಸ್, ಸ್ವೋಗೆ ಪಟ್ಟಣದ ಬಳಿ ಉರುಳಿ ಬಿದ್ದು ಈ ದುರಂತ ಸಂಭವಿಸಿತು ಎಂದು ಆರೋಗ್ಯ ಸಚಿವಾಲಯದ ವಕ್ತಾರಿಣಿ ಕಾಟಿಯಾ ಸುಂಗರ್‍ಸ್ಕಾ ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಬಲ್ಗೇರಿಯಾದ 15 ಪ್ರವಾಸಿಗರು ಮೃತಪಟ್ಟಿದ್ದು, ಗಾಯಗೊಂಡ ಇತರ 27 ಜನರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.  ಯೂರೋಪ್ ದೇಶಗಳಲ್ಲೇ ಬಲ್ಗೇರಿಯ ಅತ್ಯಂತ ಬಡ ರಾಷ್ಟ್ರವಾಗಿದ್ದು, ಕಳಪೆ ರಸ್ತೆಗಳಿಂದಾಗಿ ಪ್ರತಿ ವರ್ಷ ಅನೇಕ ಅಪಘಾತಗಳಿಂದ ಸಾವು-ನೋವುಗಳು ಸಂಭವಿಸುತ್ತಿವೆ.

Facebook Comments

Sri Raghav

Admin