8 ಕೋಟಿ ಕಮಿಷನ್ ಪಡೆದ ಆರೋಪ : ಸಿಐಡಿ ತನಿಖೆಗೂ ಸಿದ್ದ ಎಂದ ಶಾಸಕ ಗೌರಿಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

Gourishankar--01

ತುಮಕೂರು,ಆ.26-ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ನಾನು ಸಿಐಡಿ ತನಿಗೂ ಸಿದ್ಧವಿದ್ದೇನೆ. ಅಲ್ಲದೆ ಇಲ್ಲಸಲ್ಲದ ಆರೋಪ ಮಾಡಿರುವುದರ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.  ಮಾಜಿ ಶಾಸಕ ಸುರೇಶ್ ಗೌಡ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದು, ಸೋಲಿನ ಹತಾಶೆಯಲ್ಲಿದ್ದಾರೆ. ನಾನು 8 ಕೋಟಿ ಕಮಿಷನ್ ತೆಗೆದುಕೊಂಡಿರುವ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷ್ಯಾಧಾರಗಳಿದ್ದರೆ ಸಿಬಿಐ ತನಿಖೆಗೂ ಸಿದ್ಧ ಎಂದು ಸ್ಪಷ್ಟೀಕರಿಸಿದರು.

. ಬಿಜೆಪಿ ಪಟಾಲಂಗಳ ದಂಧೆಗೆ ಕಡಿವಾಣ ಹಾಕಲಾಗಿದ್ದು, ಅವರು ನಡೆಸುತ್ತಿದ್ದಅಕ್ರಮ ದಂಧೆಗಳು ಹಾಗೂ ಕಳ್ಳತನಗಳ ವಿರುದ್ಧ ಪೊಲೀಸರು ಮತ್ತು ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮಕೈಗೊಂಡರೆ ಅದಕ್ಕೆ ನಾವು ಹೊಣೆಗಾರರೇ..? ಇಂತಹವರನ್ನು ನಾನು ರಕ್ಷಿಸಬೇಕಿತ್ತೇ ಎಂದು ಪ್ರಶ್ನಿಸಿದರು.

ಹಿಂದಿನ ಶಾಸಕರ ಅವಧಿಯಲ್ಲಿ ಆದ ಬಗರ್‍ಹುಕುಂನಿಂದ ಮಂಜೂರಾದ ಜಮೀನುಗಳ ಸಾಗುವಳಿ ಚೀಟಿಯ ನೀಡುವ ಸಂದರ್ಭದಲ್ಲಿ ಆದಂತಹ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆಗೆ ಒಪ್ಪಿಸುತ್ತೇನೆ. ಕೆಐಡಿಬಿ ವತಿಯಿಂದ 1,400 ಕೋಟಿ ರೂ. ಕಾಮಗಾರಿಯನ್ನು ದೇವರಾಯ ಪಟ್ಟಣದ ಕೆರೆಯ ಅಭಿವೃದ್ಧಿಗೆಂದು ಬಿಜೆಪಿ ಸರ್ಕಾರ ನೀಡಿದ್ದು, ಇದರ ಕಾಮಗಾರಿ ಸ್ಥಗಿತಗೊಂಡು ಹಣ ವಾಪಸ್ ಹೋಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ. ಮಾಜಿ ಶಾಸಕರೇ ನಿಮ್ಮ ಅವಧಿಯಲ್ಲಾದ ಇನ್ನೂ ಬಹಳಷ್ಟು ಹಗರಣಗಳಿವೆ. ಅವುಗಳನ್ನ ಹಂತ-ಹಂತವಾಗಿ ದಾಖಲೆಗಳ ಸಮೇತ ತನಿಖೆಗೆ ಆದೇಶಿಸುತ್ತೇವೆ ಅದನ್ನು ಬಹಿರಂಗಗೊಳಿಸುತ್ತೇವೆ ಎಂದರು.  ಸುದ್ಧಿಗೋಷ್ಠಿಯಲ್ಲಿ ವೈ.ಟಿ.ನಾಗರಾಜು, ಬೆಳಗುಂಬ ವೆಂಕಟೇಶ್, ರುದ್ರೇಶ್, ಹಿರೇಹಳ್ಳಿ ಮಹೇಶ್, ವಿಜಕುಮಾರ್, ಬಾಲಣ್ಣ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin