ಫೈನಲ್‍ ಪ್ರವೇಶಿಸಿದ ಸಿಂಧು, ‘ಚಿನ್ನ’ದ ಕನಸು ಇನ್ನೂ ಜೀವಂತ

ಈ ಸುದ್ದಿಯನ್ನು ಶೇರ್ ಮಾಡಿ

Sindhu
ಜಕಾರ್ತ,ಆ.27- ಇಂಡೋನೇಷ್ಯದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಹೆಮ್ಮೆಯ ಆಟಗಾರ್ತಿ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಚಿನ್ನದ ಪದಕ ಗೆಲ್ಲುವ ತಮ್ಮ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಇಂದು ನಡೆದ ರೋಚಕ ಹಣಾಹಣಿಯಲ್ಲಿ ಒಲಿಂಪಿಕ್ಸ್ ರಜತಾ ಪದಕ ವಿಜೇತೆ ಸಿಂಧು ಜಪಾನ್‍ನ ಪ್ರಬಲ ಸ್ಫರ್ಧಿ. ಅಕೈನ್ ಯಮಗುಚಿ ಅವರನ್ನು ಮಣಿಸಿ ಫೈನಲ್ ತಲುಪಿದರು.  ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ್ತಿ ಸಿಂಧು, ಅಕೈನ್ ಅವರನ್ನು 21-27, 15-21, 21-10ರಲ್ಲಿ ಮಣಿಸಿ ಅಂತಿಮ ಹಂತ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಬಂಗಾರದ ಪದಕ ಲಭಿಸುವ ಭರವಸೆ ಮೂಡಿದೆ.

ಸೆಮಿಫೈನಲ್‍ನಲ್ಲಿ ಭಾರತದ ಮತ್ತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಮಣಿಸಿ ಈಗಾಗಲೇ ಫೈನಲ್ ತಲುಪಿರುವ ಚೀನೀ ದೈತ್ಯ ಆಟಗಾರ್ತಿ ತೈ ಜು-ಹಿಂಗಿ ಅವರನ್ನು ಸಿಂಧು ಎದುರಿಸಲಿದ್ದಾರೆ. ಈ ಅಂತಿಮ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin