ಸರ್ ಡಾನ್ ಬ್ರಾಡ್ಮನ್‍ 110ನೇ ಹುಟ್ಟುಹಬ್ಬಕ್ಕೆ ಗೂಗಲ್’ನಿಂದ ಡೂಡಲ್‍ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

Google--1

ಮುಂಬೈ, ಆ. 27- ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಆಟಗಾರ, ನಾಯಕ ಸರ್ ಡಾನ್ ಬ್ರಾಡ್ಮನ್‍ರ 110ನೆ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ತನ್ನ ಡೂಡಲ್‍ನಲ್ಲಿ ಗೌರವ ಸಲ್ಲಿಸಿದೆ. ಸರ್ ಬ್ರಾಡ್ಮನ್ ಅವರು ಚೆಂಡನ್ನು ಬೌಂಡರಿಗಟ್ಟುವ ಚಿತ್ರವನ್ನು ಡೂಡಲ್‍ನಲ್ಲಿ ಪ್ರಕಟಿಸಿದೆ. ಬ್ರಾಡ್ಮನ್ ಆಗಸ್ಟ್ 27, 1908ರಲ್ಲಿ ಜನಿಸಿ ತಮ್ಮ 20 ನೆ ವರ್ಷದಲ್ಲೆ ಕ್ರಿಕೆಟ್ ಅಂಗಳಕ್ಕೆ ಹೆಜ್ಜೆ ಇಟ್ಟವರು.

ತಮ್ಮ ನಾಯಕತ್ವದ ಸಮಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದ ನಾಯಕನಾಗಿಯೂ ಬಿಂಬಿತಗೊಂಡಿದ್ದರು. ಬ್ರಾಡ್ಮನ್ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ನಂತರ ಆಡಳಿತ ಮಂಡಳಿ, ಆಟಗಾರರ ಆಯ್ಕೆ ವಿಭಾಗದ ಜವಾಬ್ದಾರಿಯ ಜೊತೆಗೆ ಉತ್ತಮ ಅಂಕಣಕಾರರಾಗಿಯೂ 3 ದಶಕಗಳ ಕಾಲ ತಮ್ಮನ್ನು ಗುರುತಿಸಿಕೊಂಡಿದ್ದರು.

ತಮ್ಮ ಕ್ರಿಕೆಟ್ ಜೀವನದ ಪಯಣದಲ್ಲಿ ಅವರು ಅತಿ ಹೆಚ್ಚು ಬ್ಯಾಟಿಂಗ್ ಅವರೇಜ್, ಅತಿ ಹೆಚ್ಚು ಸರಣಿ ಬ್ಯಾಟಿಂಗ್ ಅವರೇಜ್, ಶತಕ ಹಾಗೂ ದ್ವಿಶತಕಗಳನ್ನು ಉತ್ತಮ ರನ್‍ರೇಟ್‍ನೊಂದಿಗೆ ಗಳಿಸಿರುವುದೇ ಅಲ್ಲದೆ ಟೆಸ್ಟ್ ಕ್ರಿಕೆಟ್‍ನಲ್ಲಿ 5ನೆ ಕ್ರಮಾಂಕದಲ್ಲಿ ಅಂಗಳಕ್ಕಿಳಿದು ಎರಡು ಬಾರಿ ತ್ರಿಶತಕ ಬಾರಿಸಿದ ಪ್ರಥಮ ಆಟಗಾರ, ಟೆಸ್ಟ್‍ನಲ್ಲಿ ಅಜೇಯ 299 ಗಳಿಸಿ ತ್ರಿಶತಕ ವಂಚಿತ ಏಕೈಕ ಆಟಗಾರರಾಗಿಯೂ ಬಿಂಬಿಸಿಕೊಂಡಿದ್ದಾರೆ.

ಬ್ರಾಡ್ಮನ್ ಟೆಸ್ಟ್ ಜೀವನದಲ್ಲಿ 100ರ ಸರಾಸರಿಯನ್ನು ಹೊಂದಬಹುದಾಗಿತ್ತಾದರೂ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‍ನ ಲೆಗ್ ಸ್ಪಿನ್ನರ್ ಎರಿಕ್ ಹೋಲಿಸ್ ಬೌಲಿಂಗ್‍ನಲ್ಲಿ ಔಟಾದರು ಆ ಪಂದ್ಯದಲ್ಲಿ ಸರ್ ಡಕ್‍ಔಟ್ ಆಗಿದ್ದರಿಂದ 99.94 ಸರಾಸರಿ ಹೊಂದಿದ್ದಾರೆ.  ಬ್ರಾಡ್ಮನ್ 2001ರಲ್ಲಿ ತಮ್ಮ 92ನೆ ಕೊನೆಯುಸಿರೆಳೆದರು. 2009ರಲ್ಲಿ ಅವರಿಗೆ ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಗೌರವ ದೊರೆಯಿತು. ಇಂದು ಅವರ 110ನೆ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್‍ನಲ್ಲಿ ಅವರಿಗೆ ನಮನ ಸಲ್ಲಿಸಿದೆ.

Facebook Comments

Sri Raghav

Admin