ಜಂಟಿ ಸಮರಾಭ್ಯಾಸ : ಸೌಹಾರ್ದ ವಾಲಿಬಾಲ್ ಪಂದ್ಯದಲ್ಲಿ ಪಾಕ್ ಮಣಿಸಿದ ಭಾರತೀಯ ಯೋಧರು..!

ಈ ಸುದ್ದಿಯನ್ನು ಶೇರ್ ಮಾಡಿ

India

ಚೆಬಾರ್ಕುಲ್/ಚೆಲ್ಯಾಬಿಸ್ಕ್(ರಷ್ಯಾ), ಆ.27-ರಷ್ಯಾದಲ್ಲಿ ಭಯೋತ್ಪಾದನೆ ವಿರುದ್ಧದ ಸಮರಾಭ್ಯಾಸದ ವೇಳೆ ನಡೆದ ಸೌಹಾರ್ದಯುತ ವಾಲಿಬಾಲ್ ಪಂದ್ಯದ ಫೈನಲ್‍ನಲ್ಲಿ ಭಾರತೀಯ ಯೋಧರು ಪಾಕ್ ವಿರುದ್ಧ ಜಯಸಾಧಿಸಿದ್ದಾರೆ.  ಶಾಂಘೈ ಸಹಕಾರ ಸಂಘದ(ಎನ್‍ಸಿಒ) ವತಿಯಿಂದ ರಷ್ಯಾದ ಬೆಬಾರ್ಕುಲ್ ಮತ್ತು ಚೆಲ್ಯಾಬಿಸ್ಕ್ ಪ್ರದೇಶಗಳಲ್ಲಿ ಶಾಂತಿ ಅಭಿಯಾನ-2018 ಅಡಿಯಲ್ಲಿ ಸದಸ್ಯ ರಾಷ್ಟ್ರಗಳ ಜಂಟಿ ಸಮರಾಭ್ಯಾಸ ನಡೆಯಿತು. ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಯೋಧರು ಭಾಗವಹಿಸಿದ್ದರು.

ಸಮರಾಭ್ಯಾಸದ ವೇಳೆ ತಂಡಗಳ ನಡುವೆ ಸೌಹಾರ್ದಯುತ ವಾಲಿಬಾಲ್ ಪಂದ್ಯ ಆಯೋಜಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಯೋಧರ ತಂಡ ಫೈನಲ್ ಪ್ರವೇಶಿಸಿದ್ದರು. ಅಂತಿಮ ಹಣಾಹಣಿಯಲ್ಲಿ ಭಾರತ ಯೋಧರು ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದರು.

Facebook Comments

Sri Raghav

Admin