ಹೊಸ ದಿಗ್ಬಂಧನ ಪ್ರಶ್ನಿಸಿ ಅಮೆರಿಕ ವಿರುದ್ಧ ಐಸಿಜೆ ಮೆಟ್ಟಿಲೇರಿದ ಇರಾನ್

ಈ ಸುದ್ದಿಯನ್ನು ಶೇರ್ ಮಾಡಿ

Iran-01

ಹೇಗ್, ಆ.27-ಇರಾನ್ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನ ಈಗ ಅಂತಾರಾಷ್ಟ್ರೀಯ ನ್ಯಾಯಾಲಯದ(ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್-ಐಸಿಜೆ) ಮೆಟ್ಟಿಲೇರಿದೆ. ಅಮೆರಿಕದ ಹೊಸ ದಿಗ್ಬಂಧನ ಕ್ರಮವನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ ದಾವೆ ಹೂಡಿದಿರುವ ಇರಾನ್ ಇಂದು ಅಮೆರಿಕ ವಿರುದ್ಧ ವಾದಿಸಲಿದೆ. ಇದರೊಂದಿಗೆ ಟೆಹರಾನ್ ಮತ್ತು ವಾಷಿಂಗ್ಟನ್ ನಡುವೆ ಪ್ರಬಲ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.

ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ವಾರಗಳ ಹಿಂದೆ ಇರಾನ್ ಮೇಲೆ ಹೊಸ ಏಕಪಕ್ಷೀಯ ಆರ್ಥಿಕ ದಿಗ್ಬಂಧನ ವಿಧಿಸಿದ್ದರು. 2015ರ ಐತಿಹಾಸಿಕ ಒಪ್ಪಂದ ಅಡಿ ತೆರವುಗೊಳಿಸಲಾಗಿದ್ದ ಕಠಿಣ ದಂಡ ಶುಲ್ಕಗಳನ್ನು ಇರಾನ್ ವಿರುದ್ಧ ಜಾರಿಗೊಳಿಸಲಾಗಿದೆ.

ನವೆಂಬರ್ ನಂತರ ಇರಾನ್ ಮೇಲೆ ಅಮೆರಿಕ ವಿಧಿಸುತ್ತಿರುವ ಎರಡನೇ ಆರ್ಥಿಕ ದಿಗ್ಬಂಧನದ ಕ್ರಮ ಇದಾಗಿದೆ. ಇರಾನ್ ಮೌಲ್ಯಯುತ ತೈಲ ಮತ್ತು ಇಂಧನ ವಲಯಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ಈ ಕ್ರಮ ಕೈಗೊಂಡಿದೆ. ಇದರ ವಿರುದ್ಧ ಕುಪಿತಗೊಂಡಿರುವ ಇರಾನ್ ಸರ್ಕಾರ ಈಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಕಾನೂನು ಸಂಘರ್ಷಕ್ಕೆ ಅಖಾಡ ಅಣಿಯಾಗಿದೆ.

Facebook Comments

Sri Raghav

Admin