ಆರ್’ಬಿಐನಲ್ಲಿ ಸ್ಪೆಷಲಿಸ್ಟ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

rbi-sbi-1
ಭಾರತೀಯ ರಿಸರ್ವ ಬ್ಯಾಂಕ್ (ಆರ್’ಬಿಐ) ಬಿ ದರ್ಜೆಯ ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 60
ಹುದ್ದೆಗಳ ವಿವರ
ಬಿ ದರ್ಜೆಯ ಹುದ್ದೆಗಳು
1.ಫೈನಾನ್ಸ್ – 14
2.ಡಾಟ ಅನಾಲಿಟಿಕ್ಸ್ – 14
3.ರಿಸ್ಕ್ ಮಾಡಲಿಂಗ್ – 12
4.ಫೊರ್ಯಾನ್ಸಿಕ್ ಆಡಿಟ್ – 12
5.ಪ್ರೊಪೆಷನಲ್ ಕಾಫಿ ಎಡಿಟಿಂಗ್ – 04
6.ಮಾನವ ಸಂಪನ್ಮೂಲ ನಿರ್ಹವಣೆ – 04
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂಬಿಎ (ಫೈನಾನ್ಸ್), ಪಿಜಿಡಿಎಂ, ಕ್ರ.ಸಂ 2 ಮತ್ತು 3ರ ಹುದ್ದೆಗೆ ಎಂಬಿಎ (ಫೈನಾನ್ಸ್), ಕ್ರ.ಸಂ 4ರ ಹುದ್ದೆಗೆ ಸಿಎ, ಐಸಿಡಬ್ಲ್ಯೂಎ, ಕ್ರ. ಸಂ 5ರ ಹುದ್ದೆಗೆ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 6ರ ಹುದ್ದೆಗೆ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಪಿಜಿ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 24 ವರ್ಷ, ಗರಿಷ್ಠ 34 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಹಿಂದುಳಿದವರಿಗೆ 3 ವರ್ಷ, ಪ,ಜಾ, ಪ.ಪಂ ದವರಿಗೆ 5 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದವರಿಗೆ 850 ರೂ, ಪ.ಜಾ, ಪ.ಪಂ ದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದ್ದು, ಸಿಬ್ಬಂದಿ ವರ್ಗದವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.rbi.org.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಲಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin