ಏಷ್ಯನ್ ಗೇಮ್ಸ್’ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟ ಸೈನಾ

ಈ ಸುದ್ದಿಯನ್ನು ಶೇರ್ ಮಾಡಿ

Jwala--01

ಜಕಾರ್ತ, ಆ.27-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದ ಸೆಮಿಫೈನಲ್ಸ್‍ನಲ್ಲಿ ಇಂದು ಚೀನಿ ತೈಪೆಯ ತೈ ಜು ಯಿಂಗ್ ವಿರುದ್ಧ ಪರಾಭವಗೊಂಡ ಭಾರತದ ಸೈನಾ ನೆಹ್ವಾಲ್ ಕಂಚು ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದು ಹಿಂಗ್ ವಿರುದ್ಧ ಸೈನಾ ಅನುಭವಿಸಿದ 10ನೇ ನೇರ ಸೋಲು.

ವಿಶ್ವದ 10ನೇ ಕ್ರಮಾಂಕದ ಹಾಗೂ ಒಲಿಂಪಿಕ್ ಪದಕ ವಿಜೇತೆ ಸೈನಾ ಉತ್ತಮ ಆರಂಭದೊಂದಿಗೆ ತೀವ್ರ ಪೈಪೋಟಿ ನೀಡಿದರೂ 17-21, 14-21ರಲ್ಲಿ ಯಿಂಗ್ ವಿರುದ್ಧ ಪರಾಭವಗೊಂಡರು. ಸೈನಾ ಮತ್ತು ಯಿಂಗ್ ಬಿರುಸಾದ ಸರ್ವ್ ಮತ್ತು ಹೊಡೆತಗಳೊಂದಿಗೆ ತೀವ್ರ ಹಣಾಹಣಿ ನಡೆಸಿ ಕ್ರೀಡಾಸಕ್ತರಲ್ಲಿ ಕುತೂಹಲ ಕೆರಳಿಸಿದ್ದರು. ಆದರೆ ಮೇಲುಗೈ ಸಾಧಿಸಿದ ಚೀನಿ ತೈಪೆ ಆಟಗಾರ್ತಿಗೆ ಜಯ ಲಭಿಸಿತು. ಈ ಪಂದ್ಯದ ಮೂಲಕ ಹೆಚ್ಚು ಪಾಯಿಂಟ್‍ಗಳನ್ನು ಯಿಂಗ್ ಗಳಿಸಿದ್ದಾರೆ.  ಸೆಮಿಫೈನಲ್ ತಲುಪಿದ್ದ ಸೈನಾ ಮತ್ತು ಪಿ.ವಿ.ಸಿಂಧು ಕನಿಷ್ಠ ಕಂಚು ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು.

Facebook Comments

Sri Raghav

Admin