ಪ್ರವಾಹ ಪೀಡಿತ ಕೇರಳದಲ್ಲಿ ರಾಹುಲ್ ರೌಡ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Rahul-gandhi-in-kelrala
ಚಂಗನೂರು, ಆ.28-ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಇಂದು ಕೇರಳದ ಪ್ರವಾಹ ಸಂತ್ರಸ್ಥ ಚಂಗನೂರು ತಾಲೂಕಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ನೊಂದವರ ಅಹವಾಲುಗಳನ್ನು ಸ್ವೀಕರಿಸಿದರು. ಜರ್ಮನ್ ಮತ್ತು ಲಂಡನ್ ಪ್ರವಾಸದ ನಂತರ ಇಂದು ಬೆಳಗ್ಗೆ ನೇರವಾಗಿ ತಿರುವನಂತಪುರಕ್ಕೆ ವಿಮಾನದಲ್ಲಿ ಆಗಮಿಸಿದ ರಾಹುಲ್ ನಂತರ ಹೆಲಿಕಾಪ್ಟರ್ ಮೂಲಕ ಅಳಪುಳ ಜಿಲ್ಲೆಯ ಚಂಗನೂರಿಗೆ ತೆರಳಿ ಪ್ರವಾಹ ಸಂತ್ರಸ್ಥರ ಶಿಬಿರಗಳಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ನೈತಿಕ ಸ್ಥೈರ್ಯ ತುಂಬಿದರು. ರಾಹುಲ್ ಇಂದು ಮತ್ತು ನಾಳೆ ಕೇರಳದ ವಿವಿಧ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಸ್ಟಾಲಿನ್‍ಗೆ ಶುಭಾಶಯ: ಡಿಎಂಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಂ.ಕೆ.ಸ್ಟಾಲಿನ್ ಅವರಿಗೆ ರಾಹುಲ್ ಶುಭಾಶಯ ಕೋರಿದ್ದಾರೆ.

Facebook Comments