ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

Lathi-Charge--01

ಕೊಟ್ಲಿ(ಪಿಒಕೆ) (ಪಿಟಿಐ), ಆ.28-ತಮ್ಮ ಹಕ್ಕುಗಳ ಈಡೇರಿಕೆಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೂಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮ ಹಲವು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಕೊಟ್ಲಿ ಪಟ್ಟಣದಲ್ಲಿ ನಡೆದಿದೆ.

ಈ ಪ್ರಾಂತ್ಯದಲ್ಲಿ ಏಳು ದಶಕಗಳಿಂದ ಪಾಕಿಸ್ತಾನದ ದುರಾಡಳಿತದಿಂದ ಬೇಸತ್ತಿರುವ ಪಿಒಕೆ ಮಂದಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ, ಪೂಲೀಸ್ ದೌರ್ಜನ್ಯ, ಮೂಲಭೂತ ಸೌಕರ್ಯಗಳ ಕೊರತೆ ಮೊದಲಾದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಧರಣಿ ಶಾಂತಿಯುತವಾಗಿದ್ದರೂ ಸಹ ಪಾಕಿಸ್ತಾನ ಪೂಲೀಸರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿ ಲಾಠಿ ಪ್ರಹಾರ ಮಾಡಿದರು. ಈ ಘಟನೆಯಲ್ಲಿ ಅನೇಕರಿಗೆ ತೀವ್ರ ಗಾಯಗಳಾಗಿವೆ. ಪೂಲೀಸರ ದೌರ್ಜನ್ಯವನ್ನು ಪಿಒಕೆ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

Facebook Comments

Sri Raghav

Admin