‘ಬೆಳ್ಳಿ’ ಸಾಧನೆ ಮಾಡಿದ ಭಾರತದ ಪುರುಷ-ಮಹಿಳಾ ಟೀಮ್ ಅರ್ಚರಿ

ಈ ಸುದ್ದಿಯನ್ನು ಶೇರ್ ಮಾಡಿ

Teram

ಜಕಾರ್ತ (ಪಿಟಿಐ), ಆ.28-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‍ನ 10ನೇ ದಿನವಾದ ಇಂದು ಕೂಡ ಭಾರತದ ಪದಕ ಬೇಟೆ ಮುಂದುವರಿದಿದೆ. ಟೀಮ್ ಆರ್ಚರಿ(ತಂಡದ ಬಿಲ್ಲುಗಾರಿಕೆ) ಪಂದ್ಯದಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.  ಇಂದು ನಡೆದ ಪುರುಷರ ಕಂಬೈಂಡ್ ಟೀಮ್ ಆರ್ಚರಿ ಫೈನಲ್‍ನಲ್ಲಿ ಭಾರತದ ಬಿಲ್ಲುಗಾರಿಕೆ ಪ್ರವೀಣರು ಕಂಚಿನ ಪದಕ ಗೆದ್ದರು. ಪ್ರಬಲ ಕೊರಿಯಾ ತಂಡದ ವಿರುದ್ಧ ಪರಾಭವಗೊಂಡರೂ ಭಾರತದ ಬಿಲ್ಲುಗಾರರು ಕಂಚಿನ ಪದಕಗಳನ್ನು ಕೊರಳಿಗೇರಿಸಿದರು. ಈ ತಂಡದಲ್ಲಿ ಅಭಿಷೇಕ್ ವರ್ಮ, ರಜತ್ ಚೌಹಾಣ್ ಮತ್ತು ಅಮನ್ ಸೈನಿ ಇದ್ದರು.

ಇಂದು ನಡೆದ ಫೈನಲ್ಸ್‍ನಲ್ಲಿ ಭಾರತದ ಬಿಲ್ಲುಗಾರಿಕೆ ಪಟುಗಳಾದ ಮುಸ್ಕಾನ್ ಕಿರಾರ್, ಮದುಮಿತಾ ಕುಮಾರಿ ಹಾಗೂ ಜ್ಯೋತಿ ಸುರೇಖಾ ಅವರನ್ನು ಒಳಗೊಂಡ ತಂಡ ಕೊರಿಯಾಗೆ ಉತ್ತಮ ಪೈಪೋಟಿ ನೀಡಿದ್ದರೂ, ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮೊದಲ ಸೆಟ್‍ನಲ್ಲಿ ಭಾರತ ತಂಡ 59-57 ಸ್ಕೋರ್‍ಗಳಿಂದ ಮುನ್ನಡೆಯಲ್ಲಿತ್ತು. ತೀವ್ರ ಹಣಾಹಣಿಯ ಈ ಪಂದ್ಯದಲ್ಲಿ ಎರಡನೇ ಸೆಟ್‍ನಲ್ಲಿ ಕೊರಿಯಾ 58-56ರಿಂದ ಗೆಲವು ಸಾಧಿಸಿತು. ಮೂರನೇ ಸೆಟ್‍ನಲ್ಲಿ ಎರಡೂ ತಂಡಗಳು ತಲಾ 58 ಸ್ಕೋರ್‍ಗಳನ್ನು ಗಳಿಸಿ ಸಮಬಲ ಸಾಧಿಸಿದ್ದವು. ಫೈನಲ್ಸ್‍ನಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದ ಭಾರತ 55-58ರಲ್ಲಿ ಕೊರಿಯಾಗೆ ಮಣಿಯಿತು.  ಭಾರತ ತಂಡವು ಕೊರಿಯಾ ವಿರುದ್ಧ 228-231ರಲ್ಲಿ ಪರಾಭವಗೊಂಡರೂ ದ್ವಿತೀಯ ಸ್ಥಾನ ಪಡೆದಿದೆ.

ಮಧುಮಿತಾಗೆ 10 ಲಕ್ಷ ಬಹುಮಾನ:

ಏಷ್ಯನ್ ಕ್ರೀಡಾಕೂಟದಲ್ಲಿ ಟೀಮ್ ಆರ್ಚರಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಮಧುಮಿತಾ ಕುಮಾರಿ ಅವರಿಗೆ ಜಾರ್ಖಂಡ್ ಮುಖ್ಯಮಂತ್ರಿ ರಘುಭರ್‍ದಾಸ್ 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin