ಏಷ್ಯನ್ ಗೇಮ್ಸ್’ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

Sindhu--0141

ಜಕಾರ್ತ (ಪಿಟಿಐ), ಆ.28-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದ ಫೈನಲ್ಸ್‍ನಲ್ಲಿ ಇಂದು ಚೀನಿ ತೈಪೆಯ ತೈ ಜು ಯಿಂಗ್ ವಿರುದ್ಧ ಪರಾಭವಗೊಂಡ ಭಾರತದ ಪಿ.ವಿ.ಸಿಂಧು ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.  ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಸಿಂಧು ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟರ್ ಆಟಗಾತಿ ಎನಿಸಿದ್ದಾರೆ. ಇಂದು ನಡೆದ ಫೈನಲ್ ಹಣಾಹಣಿಯಲ್ಲಿ ಚೀನಿ ತೈಪೆ ಆಟಗಾರ್ತಿ ವಿರುದ್ಧ ಸಿಂಧು 13-21, 21-16ರಲ್ಲಿ ಪರಾಭವಗೊಂಡರು. ತೈ ಜು ಯಿಂಗ್ ಚಿನ್ನ ಗೆದ್ದರೆ, ಸಿಂಧು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ವಿಶ್ವದ 10ನೇ ಕ್ರಮಾಂಕದ ಹಾಗೂ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಕಂಚು ಪದಕ ಪಡೆದರು. ಸೆಮಿ-ಫೈನಲ್ಸ್‍ನಲ್ಲಿ ಸೈನಾ ಅವರು ಉತ್ತಮ ಆರಂಭದೊಂಧಿಗೆ ತೀವ್ರ ಪೈಪೋಟಿ ನೀಡಿದರೂ ಹಿಂಗ್ ವಿರುದ್ಧ 17-21, 14-21ರಲ್ಲಿ ಪರಾಭವಗೊಂಡರು. ಮತ್ತೊಂದು ಸೆಮಿಫೈನ್ಸಲ್‍ನಲ್ಲಿ ಜಪಾನಿಯ ಅಕೈನ್ ಯಗಮುಚಿ ಅವರನ್ನು ಮಣಿಸಿ ಸಿಂಧು ಫೈನಲ್ ಪ್ರವೇಶಿಸಿದ್ದರು. ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಬ್ಯಾಡ್ಮಿಂಟನ್ ಆಟಗಾರ್ತಿಯರು ಎರಡು ವೈಯಕ್ತಿಕ ಪದಕಗಳನ್ನು ಗೆದ್ದಿದ್ದಾರೆ.

Facebook Comments

Sri Raghav

Admin