ಸಾಲ ನೀಡದ ಆಟೋ ಚಾಲಕನ ಬೆನ್ನಿಗೆ ಚೂರಿಯಿಂದ ಚುಚ್ಚಿ ಪರಾರಿಯಾದ ಸ್ನೇಹಿತರು..!

ಈ ಸುದ್ದಿಯನ್ನು ಶೇರ್ ಮಾಡಿ

Murder-Blood

ಬೆಂಗಳೂರು, ಆ.28-ಸಾಲ ನೀಡಲು ನಿರಾಕರಿಸಿದ ಆಟೋ ಚಾಲಕನೊಬ್ಬನಿಗೆ ಇಬ್ಬರು ಸ್ನೇಹಿತರೇ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲಸೂರಿನ ಎಂ.ವಿ.ಗಾರ್ಡನ್ 7ನೇ ಕ್ರಾಸ್ ನಿವಾಸಿ, ಆಟೋ ಚಾಲಕ ಜಮೀರ್ ಪಾಷ (22) ಚಾಕು ಇರಿತಕ್ಕೆ ಒಳಗಾದವರು. ಆರೋಪಿಗಳಾದ ಇಸ್ಮಾಯೀಲ್ ಪಾಷ ಮತ್ತು ಮೋಸಸ್ ಘಟನೆಯ ಬಳಿಕ ಪರಾರಿಯಾಗಿದ್ದಾರೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಎಂ.ವಿ.ಗಾರ್ಡನ್ ಬಳಿ ಇದ್ದ ಜಮೀರ್ ಪಾಷ ಅವರೊಂದಿಗೆ ಗೆಳೆಯರಾದ ಇಸ್ಮಾಯೀಲ್ ಮತ್ತು ಮೋಸಸ್ ಒಂದು ಸಾವಿರ ರೂ. ಸಾಲ ಕೇಳಿದ್ದಾರೆ. ಆದರೆ ಜಮೀರ್ ಸಾಲ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿಗಳು ಚಾಕುವಿನಿಂದ ಜಮೀರ್ ಅವರ ಬೆನ್ನಿಗೆ ಇರಿದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳೀಯರು ಗಾಯಗೊಂಡಿರುವ ಜಮೀರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments