‘ಗೋಲ್ಡನ್‌ ಸ್ಟಾರ್‌’ ಗಣೇಶ್‌’ಗೆ ಪಿತೃ ವಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Ganesh--01

ಬೆಂಗಳೂರು. ಆ. 28 : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ಅವರ ತಂದೆ ರಾಮಕೃಷ್ಣಪ್ಪ ಅಲಿಯಾಸ್‌ ಕಿಶನ್‌ (82) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಕೃಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಕೊನೆಯುಸಿರೆಳೆದರು. ಮೃತರ ಅಂತ್ಯ ಸಂಸ್ಕಾರವು ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ಇಂದು ನೆರವೇರಲಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ರಾಮಕೃಷ್ಣಪ್ಪ ಅವರನ್ನು ಕೆಲ ದಿನಗಳ ಹಿಂದೆ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿದೆ. ಗಣೇಶ್ ತಂದೆ-ತಾಯಿಗಳು ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿಯಲ್ಲಿ ನೆಲೆಸಿದ್ದರು.

Facebook Comments

Sri Raghav

Admin