ಹುಡುಗರೊಂದಿಗೆ ಹರಟೆ ಹೊಡೆಯುತ್ತಿದ್ದ ಅಕ್ಕನನ್ನು ಕೊಂದ ತಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

Murder-n-01

ಪಾಲಗಢ್, ಆ.28-ಹುಡುಗರೊಂದಿಗೆ ಬೆರೆಯುತ್ತಿದ್ದ ಕಾರಣದಿಂದಾಗಿ ಕುಪಿತಗೊಂಡ ತಮ್ಮ ಅಕ್ಕನನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲಗಢ್‍ನಲ್ಲಿ ನಡೆದಿದ್ದು, ಈ ಸಂಬಂಧ 17 ವರ್ಷ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.  ವಲಿವ್ ಪಟ್ಟಣದ ಬಡಾವಣೆಯಲ್ಲಿನ ಇತರ ಹುಡುಗರೊಂದಿಗೆ 19 ವರ್ಷ ಯುವತಿ ಬೆರೆತು ಹರಟುತ್ತಿದ್ದಳು. ಇದೇ ವಿಚಾರಕ್ಕಾಗಿ ನೆರೆಹೊರೆಯವರು ಆ ಯುವತಿ ಮತ್ತು ಕುಟುಂಬದ ಬಗ್ಗೆ ಅಪಮಾನಕರ ರೀತಿಯಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ಬಾಲಕ ತನ್ನ ಅಕ್ಕನಿಗೆ ಕೆಲವು ಬಾರಿ ಹೊಡೆದು ಎಚ್ಚರಿಕೆ ನೀಡಿದ್ದ. ಆದರೆ ಇದು ಮುಂದುವರೆದ ಕಾರಣ ಕುಪಿತಗೊಂಡ ಆತ ಸಹೋದರಿಗೆ ಆಕೆಯ ದುಪ್ಪಟದಿಂದಲೇ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊ ಲೀಸ್ ಅಧಿಕಾರಿ ಭರತ್ ಜಾಧವ್ ತಿಳಿಸಿದ್ದಾರೆ. ಈ ಸಂಬಂಧ ಬಾಲಕನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin