ನೀರಿನ ಮೇಲಿರುವ ಈ ಎಲೆಯ ಮೇಲೆ ಯೋಗ ಮಾಡಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

ds
ಜಲ ನೈದಿಲೆ(ವಾಟರ್ ಲಿಲಿ) ಸಸ್ಯ ಲೋಕದ ವಿಸ್ಮಯ. ನೀರಿನಲ್ಲಿ ತಟ್ಟೆಯಾಕಾರದಲ್ಲಿ ತೇಲುವ ಈ ಹೂವಿನ ಎಲೆ ತೆಪ್ಪದಂತೆ ಇರುತ್ತದೆ. ಇದರ ಮೇಲೆ ಒಬ್ಬರು ಆರಾಮವಾಗಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ. ಇಂಥ ವಿಶಿಷ್ಟ ಅನುಭವ ತೈವಾನ್ ಜನರಿಗೆ ಲಭಿಸಿತು.  ತೈವಾನ್ ರಾಜಧಾನಿ ತೈಪೆಯ ಶೌನ್‍ಕ್ಸಿ ಪಾರ್ಕ್‍ನಲ್ಲಿ ಕಂಡು ಬಂದ ಚೇತೋಹಾರಿ ದೃಶ್ಯವಿದು. ಈ ಸುಂದರ ಉದ್ಯಾನವನದ ಕೊಳದಲ್ಲಿ ದೊಡ್ಡ ಜಲ ನೈದಿಲೆಯ ಎಲೆಗಳು ತಟ್ಟೆಯಾಕಾರದಲ್ಲಿ ಹರಡಿಕೊಂಡು ತೇಲುತ್ತಿವೆ. ತೆಪ್ಪದಂತೆ ಕಾಣುವ ಇವುಗಳನ್ನು ವಾಟರ್ ಲಿಲಿ ಎಂದೂ ಕರೆಯುತ್ತಾರೆ. ಇದರ ಮೇಲೆ ಒಬ್ಬ ವಯಸ್ಕರರು ಅಥವಾ ಇಬ್ಬರು ಮಕ್ಕಳು ಆರಾಮವಾಗಿ ಕುಳಿತು ವಿರಮಿಸುವಷ್ಟು ನೀರಿನ ನೈದಿಲೆ ಎಲೆ ಸದೃಢವಾಗಿ ಮತ್ತು ವಿಶಾಲವಾಗಿರುತ್ತದೆ.. ಇಲ್ಲಿಗೆ ಭೇಟಿ ನೀಡಿದ ವೀಕ್ಷಕರು ಈ ದೊಡ್ಡ ಎಲೆಗಳ ಮೇಲೆ ಕುಳಿತು ಕ್ಯಾಮೆರಾಗಳಿಗೆ ಫೋಸು ನೀಡಿದರು. ಮಕ್ಕಳಂತೂ ಈ ಜಲ ನೈದಿಲೆ ಎಲೆಗಳನ್ನು ನೋಡಿ ಅದರ ಮೇಲೆ ಆಸೀನರಾಗಿ ಹಿರಿಹಿರಿ ಹಿಗ್ಗಿದರು.

ds-2

ತೈವಾನ್ ನಗರಿಯ ಪಾಕ್ರ್ಸ್ ಅಂಡ್ ಸ್ಟ್ರೀಟ್ ಲೈಟ್ಸ್ ಆಫೀಸ್-ಪಿಎಸ್‍ಎಲ್‍ಒ ಈ ಅಪರೂಪದ ಸಸ್ಯ ಪ್ರಬೇಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ವಿಕ್ಟೋರಿಯಾ ವಾಟರ್ ಲಿಲಿ ಎಲೆಯು ಗರಿಷ್ಠ 85 ಕೆ.ಜಿ. ಭಾರ ಹೊರುತ್ತದೆ. ಮಹಿಳೆಯರು ಮತ್ತು ಮಕ್ಕಳು ಈ ಎಲೆಗಳ ಮೇಲೆ ಕುಳಿತು ಅನುಭವ ಪಡೆದರು.
ತೈಪೆಯ ಶೌನ್‍ಕ್ಸಿ ಪಾರ್ಕ್‍ನಲ್ಲಿ ಈ ದೊಡ್ಡ ಜಲ ನೈದಿಲೆಗಳನ್ನು ವಿಶೇಷವಾಗಿ ಬೆಳೆಸಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಇವುಗಳ ಪ್ರದರ್ಶನ ನಡೆಯುತ್ತಿದೆ.

ds-1 ds-3

Facebook Comments