ರಾಜೀವ್ ಗಾಂಧಿ ಸಾಮೂಹಿಕ ಹಿಂಸಾಚಾರದ ಪಿತಾಮಹ..!!

ಈ ಸುದ್ದಿಯನ್ನು ಶೇರ್ ಮಾಡಿ

zTweet--01

ನವದೆಹಲಿ, ಆ.28- ದೆಹಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಟ್ವಿಟರ್ ಖಾತೆಯ ಪೋಸ್ಟ್ ಒಂದು ಭಾರೀ ಸುದ್ದಿ ಮಾಡುತ್ತಿದೆ. ಸದ್ಯ ಈ ಟ್ವೀಟ್ ಚರ್ಚೆಗೆ ಎಡೆಮಾಡಿಕೊಟ್ಟಿದೆ. ತಜಿಂದರ್ ಟ್ವೀಟ್ ಮಾಡಿರುವ ಫೋಟೋದಲ್ಲಿ ಒಂದು ಫ್ಲೆಕ್ಸ್ ಇದ್ದು, ಅದರಲ್ಲಿ ರಾಜೀವ್ ಗಾಂಧಿ ಫೋಟೋ ಇದೆ. ಜೊತೆಗೆ ರಾಜೀವ್ ಗಾಂಧಿ: ಸಾಮೂಹಿಕ ಹಿಂಸಾಚಾರದ ಪಿತಾಮಹ ಎಂದು ಇಂಗ್ಲಿಷ್‍ನಲ್ಲಿ ಬರೆಯಲಾಗಿದೆ.

ಅಸಲಿಗೆ ಇದು 1984ರಲ್ಲಿ ಜರ್ಮನಿಯಲ್ಲಿ ನಡೆದ ಸಿಖ್ ಗಲಭೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಸಿಖ್ ಗಲಭೆಯ ಕುರಿತಾಗಿ ಇತ್ತೀಚೆಗೆ ಲಂಡನ್‍ನಲ್ಲಿ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ನೀಡಿದ್ದರು. ಈ ಭೇಟಿ ವೇಳೆ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಜೊತೆಗೆ ಈ ಗಲಭೆಯಲ್ಲಿ ಕಾಂಗ್ರೆಸ್‍ನ ಪಾತ್ರ ಇಲ್ಲ ಎಂದು ಹೇಳಿಕೆ ನೀಡಿದ್ದರು.

Rajeev--01

Facebook Comments

Sri Raghav

Admin