ಮೊದಲ ಕಂತಿನಲ್ಲಿ ಪ್ರತಿ ಶಾಸಕರಿಗೆ ಸಿಕ್ತು 50 ಲಕ್ಷ ರೂ ಅನುದಾನ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01
ಬೆಂಗಳೂರು, ಆ.28- ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನ ಮೊದಲ ಕಂತಿನ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 603 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ ಮೊದಲ ಕಂತಿನಲ್ಲಿ ಪ್ರತಿ ಶಾಸಕರಿಗೆ 50 ಲಕ್ಷ ರೂ.ನಂತೆ ಬಿಡುಗೆಡೆ ಮಾಡಿ ಆದೇಶಿಸಿದೆ.

ಒಟ್ಟು 143.46 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನವನ್ನು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿಟ್ಟು ಅಗತ್ಯತೆಗೆ ಅನುಗುಣವಾಗಿ ಖರ್ಚು ಮಾಡಬೇಕು.  ಪರಿಷ್ಕರಿಸಲಾದ ಮಾರ್ಗಸೂಚಿ ಅನ್ವಯ ಶಾಸಕರ ನಿಧಿ ಅನುದಾನವನ್ನು ಅನುಷ್ಠಾನಗೊಳಿಸ ಬೇಕಿದೆ. ಬಿಡುಗಡೆ ಮಾಡಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Facebook Comments

Sri Raghav

Admin