ಫ್ರಾನ್ಸ್’ನಲ್ಲಿ ನಡೆದ ಕಠಿಣ ದೈಹಿಕ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಿದ ‘ಐರನ್‍ಮ್ಯಾನ್ ‘ ಸಿಂಘಾಲ್

ಈ ಸುದ್ದಿಯನ್ನು ಶೇರ್ ಮಾಡಿ

nasik-polish
ನಾಸಿಕ್(ಮಹಾರಾಷ್ಟ್ರ) (ಪಿಟಿಐ), ಆ.28-ನಾಸಿಕ್ ಪೊಲೀಸ್ ಆಯುಕ್ತ ರವೀಂದರ್ ಕುಮಾರ್ ಸಿಂಘಾಲ್ ಫ್ರಾನ್ಸ್ ನಲ್ಲಿ ನಡೆದ ಕಠಿಣ ದೈಹಿಕ ಸಾಮಥ್ರ್ಯ ಚಟುವಟಿಕೆಗಳನ್ನು ಒಳಗೊಂಡ ಇಂಟರ್‍ನ್ಯಾಷನಲ್ ಐರನ್‍ಮ್ಯಾನ್ ಟ್ರಯಾಥ್ಲಾನ್(ಸೈಕ್ಲಿಂಗ್, ಈಜು ಮತ್ತು ಓಟ ಕ್ರೀಡೆ) ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ.

ಫ್ರಾನ್ಸ್ ನಲ್ಲಿ ಪ್ರತಿವರ್ಷ ನಡೆಯುವ ಐರನ್‍ಮ್ಯಾನ್ ಟ್ರಯಾಥ್ಲಾನ್ ಅತ್ಯಂತ ಕಠಿಣ ಕ್ರೀಡೆ. ಅಸಾಮಾನ್ಯ ದೈಹಿಕ ಸಾಮಥ್ರ್ಯದ ಅಗತ್ಯವಿರುವ ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದೇ ದೊಡ್ಡ ಸಾಹಸ. 180 ಕಿ.ಮೀ. ಸೈಕ್ಲಿಂಗ್, 4 ಕಿ.ಮೀ. ಈಜು ಹಾಗೂ 42 ಕಿ.ಮೀ. ಮ್ಯಾರಾಥಾನ್‍ನನ್ನು ಇದು ಒಳಗೊಂಡಿತ್ತು. ವಿವಿಧ ದೇಶಗಳ ಬಲ್ಯಾಢ ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಾಸಿಕ್ ಪೊಲೀಸ್ ಕಮಿಷನರ್ ಆಗಿರುವ 53 ವರ್ಷದ ಸಿಂಘಾಲ್ ಅವರು ಟ್ರಯಾಥ್ಲಾನ್‍ನನ್ನು 15 ಗಂಟೆ 13 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. 17 ಗಂಟೆಯೊಳಗೆ ಇದನ್ನು ಪೂರ್ಣಗೊಳಿಸಲು ಕಾಲ ನಿಗದಿಗೊಳಿಸಲಾಗಿತ್ತು. ಆದರೆ ಅದಕ್ಕೆ ಮುನ್ನವೇ ಇವರು ಈ ಸಾಧನೆ ಮಾಡಿದ್ದಾರೆ ಎಂದು ಅವರ ತರಬೇತದಾರ ಡಾ ಮುಸ್ತಫಾ ಟೋಪಿವಾಲಾ ಹೆಮ್ಮೆಯಿಂದ ತಿಳಿಸಿದ್ಧಾರೆ.

ಮಹಾರಾಷ್ಟ್ರ ಈ ಐಪಿಎಸ್ ಅಧಿಕಾರಿ ಫ್ರಾನ್ಸ್ ನಲ್ಲಿ ನಡೆದ ಈ ಅಂತಾರಾಷ್ಟ್ರೀಯ ಐರನ್‍ಮ್ಯಾನ್ ಟ್ರಯಾಥ್ಲಾನ್‍ನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಕಠಿಣ ಅಭ್ಯಾಸ ಮಾಡಿದ್ದರು.  2015ರಲ್ಲಿ ರೂಪದರ್ಶಿ ಮತ್ತು ನಟ ಮಿಲಿಂದ್ ಸೋಮನ್ ಈ ರೇಸ್‍ನನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಕಳೆದ ವರ್ಷ ಮಹಾರಾಷ್ಟ್ರದ ಮತ್ತೊಬ್ಬ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್ ಟ್ರಯಾಥ್ಲಾನ್‍ನಲ್ಲಿ ಭಾಗವಹಿಸಿದ್ದರು.

Facebook Comments