ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..!

ಈ ಸುದ್ದಿಯನ್ನು ಶೇರ್ ಮಾಡಿ

Vinesh--01

ನವದೆಹಲಿ, ಆ.28- ಏಷ್ಯನ್ ಗೇಮ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ವಿನೇಶ್ ಪೋಗಟ್ ಶನಿವಾರ ಜಕಾರ್ತದಿಂದ ತವರಿಗೆ ಆಗಮಿಸಿದ ಬೆನ್ನಿಗೆಯೇ ತನ್ನ ದೀರ್ಘ ಕಾಲದ ಗೆಳೆಯ ಸೋಮ್‍ವೀರ್ ರಾಥಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ವಿನೇಶ್ ವಿವಾಹ ನಿಶ್ಚಿತಾರ್ಥದಂತಹ ಜೀವನದ ಸ್ಮರಣೀಯಕ್ಷಣಕ್ಕೆ ಆಯ್ದು ಕೊಂಡಿದ್ದ ಸ್ಥಳ ವಿಭಿನ್ನವಾಗಿತ್ತು. ಗ್ರಿಕೊ-ರೊಮನ್ ಕುಸ್ತಿಪಟುಗಳಾಗಿರುವ ವಿನೇಶ್ ಹಾಗೂ ಸೋಮ್‍ವೀರ್ ದಿಲ್ಲಿಯ ಇಂದಿರಾಗಾಂಧಿ ಅಂತರ್‍ರಾಷ್ಟ್ರೀಯ ಏರ್ ಪೋರ್ಟ್‍ನ ಆಗಮನದ ದ್ವಾರದಲ್ಲಿ ನಿಶ್ಚಿತಾರ್ಥ ಉಂಗುರವನ್ನು ಬದಲಾಯಿಸಿಕೊಂಡರು.  ಈ ಅಪರೂಪದ ಕ್ಷಣಕ್ಕೆ ವಿನೇಶ್-ಸೋಮ್‍ವೀರ್ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸಾಕ್ಷಿಯಾದರು. ಶನಿವಾರವೇ 24ನೇ ವರ್ಷಕ್ಕೆ ಕಾಲಿಟ್ಟಿರುವ ವಿನೇಶ್ ಏರ್ ಪೋರ್ಟ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು.

ಸರಳವಾಗಿ, ಹಠಾತ್ತನೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ವಿನೇಶ್ ಇದರಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ ಯಾವುದೇ ವಿವಾದ-ಗೊಂದಲಗಳಿಲ್ಲ. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಈ ಕುರಿತ ಸುದ್ದಿ ಸತ್ಯಕ್ಕೆ ದೂರವಾದುದು. ನಾನು ಹಾಗೂ ಸೋಮ್‍ವೀರ್ 7-8ನೇ ವಯಸ್ಸಿನಲ್ಲಿ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವಿನ ಸ್ನೇಹ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

Facebook Comments

Sri Raghav

Admin