2.6 ಲಕ್ಷ ರೂ.ಗೆ ಹರಾಜಾಯ್ತು ವಾಹನದ 001 ಫ್ಯಾನ್ಸಿ ನಂಬರ್…!

ಈ ಸುದ್ದಿಯನ್ನು ಶೇರ್ ಮಾಡಿ

001

ಬೆಂಗಳೂರು, ಆ.29- ವಾಹನ ಪ್ರಿಯರು ಲಕ್ಕಿ ನಂಬರ್ ಖರೀದಿಸಲು ಎಷ್ಟು ಹಣ ಬೇಕಾದರೂ ಕೊಡುವ ಪುಣ್ಯಾತ್ಮರು ನಮ್ಮಲ್ಲಿದ್ದಾರೆ. ಅಂತಹದ್ದೊಂದು ಕ್ರೇಜ್ ಯುವ ಪೀಳಿಗೆಯಲ್ಲಿದೆ. ಸಾರಿಗೆ ಇಲಾಖೆಯಿಂದ  ನಡೆದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಿಡ್ ಆಗಿ ಕೆಎ-51/ಎಂಎನ್ 001 ಎಂಬ ನಂಬರ್ 2.6 ಲಕ್ಷಕ್ಕೆ ಹರಾಜು ಮಾಡಲಾಯಿತು.

ಸಾರಿಗೆ ಆಯುಕ್ತ ನಾರಾಯಣಸ್ವಾಮಿ ಅವರು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು 75 ಸಾವಿರ ಡಿಡಿ ತೆಗೆದ ಹಣವನ್ನು ಹೊರತುಪಡಿಸಿ ಹರಾಜಾದ ಹಣವನ್ನು ನೀಡಬೇಕಾಗುತ್ತದೆ. ಹರಾಜಾದ 48 ಗಂಟೆಯೊಳಗೆ ಅಂದರೆ ಎರಡು ದಿನದೊಳಗೆ ಬಿಡ್ ಮಾಡಿದ ಹಣವನ್ನು ಡಿಡಿ ಮೂಲಕ ಕಾರ್ಯದರ್ಶಿ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ನೀಡಬೇಕಾಗುತ್ತದೆ ಹಾಗೂ ಸರದಿ ಹಂಚಿಕೆ ಪತ್ರ ನೀಡಿದ ದಿನಾಂಕದಿಂದ 90 ದಿನದೊಳಗೆ ತಮ್ಮ ವಾಹನಕ್ಕೆ ನಂಬರ್ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.

ಕರ್ನಾಟಕ ಮೋಟಾರು ವಾಹನ ಕಾಯ್ದೆ ನಿಯಮಾವಳಿ-1989ಕ್ಕೆ ತಿದ್ದುಪಡಿ ಮಾಡಿ ನಿಯಮ-46(ಎ)ಗೆ ಹೊಸದಾಗಿ ಉಪ ನಿಯಮ 46(ಎಎ)ಅನ್ನು ಸೇರ್ಪಡೆ ಮಾಡಿ ಸರ್ಕಾರವು ಹೊರಡಿಸಿರುವ ಅಧಿಸೂಚನೆ ಮೇರೆಗೆ ಕೆಎ-51/ಎಂಎನ್ ಮುಂಗಡ ಶ್ರೇಣಿಯನ್ನು ಪ್ರಾರಂಭಿಸಿ ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜು ಮಾಡಿರುವುದಾಗಿ ತಿಳಿಸಿದರು.

Facebook Comments

Sri Raghav

Admin