ತ್ರಿಪಲ್ ಜಂಪ್ನಲ್ಲಿ ಭಾರತಕ್ಕೆ ಚಿನ್ನ, 48 ವರ್ಷದ ದಾಖಲೆ ಮುರಿದ ಅರ್ಪಿಂದರ್ ಸಿಂಗ್..!
ಜಕಾರ್ತ, ಆ. 29- ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೆ ಏಷ್ಯನ್ ಗೇಮ್ಸ್ನ ತ್ರಿಪಲ್ ಜಂಪ್ನಲ್ಲಿ ಅರ್ಪಿಂದರ್ ಸಿಂಗ್ ಸ್ವರ್ಣ ಬೇಟೆ ಆಡುವ ಮೂಲಕ 48 ವರ್ಷಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 1970ರಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಮಹಿಂದರ್ ಸಿಂಗ್ ಹಾಗೂ ಲಾಬ ಸಿಂಗ್ ಅವರು ಪದಕ ಗೆದ್ದ ನಂತರ ತ್ರಿಪಲ್ ಜಂಪ್ನಲ್ಲಿ ಪದಕ ಗಳಿಸದ ಕೊರಗನ್ನು ನೀಗಿಸುವ ಮೂಲಕ ಅರ್ಪಿಂದರ್ ಸಿಂಗ್ ಚಿನ್ನದ ಹುಡುಗನಾಗಿ ಬಿಂಬಿತಗೊಂಡಿದ್ದಾರೆ.
ಇಂದು ನಡೆದ 800 ಮೀಟರ್ ತ್ರಿಪಲ್ ಜಂಪ್ನಲ್ಲಿ ಅರ್ಪಿಂದರ್ ಸಿಂಗ್ ಕೇವಲ 1.46.15 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಸ್ವರ್ಣ ಬೇಟೆ ಆಡಿದರೆ, ಜಿನ್ಸೋನ್ ಜಾನ್ಸನ್ 1.46.35 ನಿಮಿಷಗಳಲ್ಲಿ ಗುರಿ ಸಾಧಿಸಿ ರಜತ ಪದಕವನ್ನು ಗೆದ್ದರು. ಈ ಬಾರಿಯ ಏಷ್ಯನ್ ಗೇಮ್ಸ್ನ ಟ್ರಾಕ್ನಲ್ಲಿ ಈಗಾಗಲೇ ಮೊಹಮ್ಮದ್ ಅನಾಸ್ ಯಾಹಿಯಾ, ಹೀಮಾದಾಸ್, ಆರೋಕಿಯಾ ರಾಜೀವ್, ಪೂವಮ್ಮ ರಾಜು ಅವರು ಬೆಳ್ಳಿ ಪದಕಗಳನ್ನು ಗೆದ್ದು ಹುಮ್ಮಸ್ಸು ಮೂಡಿಸಿದ್ದರು. 52 ಕೆಜಿ ಮಹಿಳಾ ಕ್ವಾರಸ್ನಲ್ಲಿ ಪಿಂಕಿ ಬಲ್ಲಾರ ಹಾಗೂ ಮಲಾಪ್ರಭಾ ಯಲ್ಲಪ್ಪ ಜಾಧವ್ ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಮಹಿಳೆಯರ 200 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ ಭಾರತದ ದ್ಯುತಿ ಚಂದ್ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಭಾರತ ಇದುವರೆಗೂ 10 ಚಿನ್ನ, 20 ಸಿಲ್ವರ್, 23 ಕಂಚಿನ ಪದಕ ಸೇರಿದಂತೆ ಒಟ್ಟು 53 ಪದಕಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.