ಪಶ್ಚಿಮ ಇರಾಕ್‍ನಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ 11 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Car-Bomb

ರಮಡಿ , ಆ.29- ಕಾರ್ ಬಾಂಬ್ ಸ್ಫೋಟದಲ್ಲಿ 11 ಮಂದಿ ಮೃತಪಟ್ಟು , ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಇರಾಕ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಾನವ ಬಾಂಬರ್ ಒಬ್ಬ ತಾನು ಚಾಲನೆ ಮಾಡುತ್ತಿದ್ದ ಕಾರನ್ನು ಅಲ್-ಖೈಮ್ ಪಟ್ಟಣದ ಬಳಿ ಇಂದು ಸ್ಫೋಟಿಸಿದ. ಈ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ 11 ಮಂದಿ ಹತರಾದರು. ಗಾಯಗೊಂಡ 16 ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸ್ ಕ್ಯಾಪ್ಟನ್ ಮಹಮದ್ ಜಸ್ಸೆಮ್ ತಿಳಿಸಿದ್ದಾರೆ.

Facebook Comments

Sri Raghav

Admin