ಹಳಿ ಮೇಲೆ ಗುಡ್ಡ ಕುಸಿತ, ಅನಿರ್ದಿಷ್ಟಾವಧಿವರೆಗೆ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Train--01

ಹಾಸನ, ಆ.29- ಯಡಕುಮರಿ ಬಳಿ ಪದೇ ಪದೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು -ಮಂಗಳೂರು ರೈಲ್ವೆ ಸಂಚಾರವನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗಿದೆ. ಈ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಡ್ಡಗಳು ನೆನೆದು ರೈಲ್ವೆ ಹಳಿ ಮೇಲೆ ಕುಸಿಯುತ್ತಿವೆ. ಗುಡ್ಡ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಆದರೆ ಗುಡ್ಡ ಕುಸಿತವಾಗುತ್ತಿದೆ. ಈಗಾಗಲೇ ಭಾರೀ ಮಳೆ ಹಿನ್ನೆಲೆಯಲ್ಲಿ ಶಿರಾಡಿಘಾಟ್ ಮಾರ್ಗವನ್ನು ಬಂದ್ ಮಾಡಲಾಗಿದೆ. ಹಾಗಾಗಿ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುತ್ತಿದೆ. ಮಂಗಳೂರು ತಲುಪುವಂತಹ ಪ್ರಯಾಣಿಕರು ಬದಲಿ ಮಾರ್ಗವನ್ನು ಅನುಸರಿಸುವಂತಾಗಿದೆ.

Facebook Comments

Sri Raghav

Admin