ಏಷ್ಯನ್ ಗೇಮ್ಸ್’ನಲ್ಲಿ ಸೆಮಿಫೈನಲ್‍ ಪ್ರವೇಶಿಸಿದ ಬಾಕ್ಸರ್ ಅಮಿತ್

ಈ ಸುದ್ದಿಯನ್ನು ಶೇರ್ ಮಾಡಿ

Amit--01

ಜಕಾರ್ತ (ಪಿಟಿಐ), ಆ.28-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ 11ನೇ ದಿನವಾದ ಇಂದು ಭಾರತದ ಬಾಕ್ಸರ್ ಅಮಿತ್ ಪಂಘಲ್ 49 ಕೆಜಿ ವಿಭಾಗ ಪಂದ್ಯದಲ್ಲಿ ಇಂದು ಸೆಮಿಫೈನಲ್ ಪ್ರವೇಶಿಸಿದ್ದು, ಪದಕ ಖಚಿತಪಡಿಸಿದ್ದಾರೆ.  ಕಾಮನ್‍ವೆಲ್ತ್ ಗೇಮ್ಸ್‍ನ ರಜತ ಪದಕ ವಿಜೇತ ಹಾಗೂ ಯೋಧರೂ ಆಗಿರುವ ಹರ್ಯಾಣದ 22 ವರ್ಷದ ಅಮಿತ್, ಇಂದು ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಜಂಗ್ ರಾಯೊಂಗ್ ಅವರನ್ನು 5-0ರಿಂದ ನಿರಾಯಾಸವಾಗಿ ಸೋಲಿಸಿ ಮುಂದಿನ ಹಂತ ಪ್ರವೇಶಿಸಿದರು.  ಸೆಮಿಫೈನಲ್ಸ್‍ನಲ್ಲಿ ಅಮಿತ್ ಫಿಲಿಪ್ಪೈನ್ಸ್‍ನ ಕಾರ್ಲೊ ಪಾಲಂ ವಿರುದ್ಧ ಸೆಣಸಲಿದ್ದಾರೆ.

ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವವರು ಕಂಚು ಪದಕ ಪಡೆಯುವುದು ಖಚಿತ. ಹೀಗಾಗಿ ಅಮಿತ್‍ಗೆ ಪದಕ ಖಚಿತವಾಗಿದೆ.

Facebook Comments

Sri Raghav

Admin