ಕ್ಯಾಟ್ ಫ್ಯಾಷನ್ ಶೋನಲ್ಲಿ ಬೆಕ್ಕುಗಳ ಮಾರ್ಜಾಲ ನಡಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

DS

ಫ್ಯಾಷನ್ ಪೆರೇಡ್, ರ್ಯಾಂಪ್ ಶೋ, ಕ್ಯಾಟ್ ವಾಕ್ ಕೇವಲ ರೂಪದರ್ಶಿಯರು ಮತ್ತು ಸುಂದರಿಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳು ಕೂಡ ಸೌಂದರ್ಯ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂಬುದಕ್ಕೆ ನ್ಯೂಯಾರ್ಕ್ ನಗರ ಸಾಕ್ಷಿಯಾಯಿತು. ಇಲ್ಲಿ ನಡೆದ ವಾರ್ಷಿಕ ಕ್ಯಾಟ್ ಫ್ಯಾಷನ್ ಶೋನಲ್ಲಿ ಮುದ್ದಾದ ಬೆಕ್ಕುಗಳು ಮಾರ್ಜಾಲ ನಡಿಗೆಯಲ್ಲಿ ಎಲ್ಲರನ್ನು ಬೆರಗುಗೊಳಿಸಿದವು.

ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಚಾರಿತ್ರಿಕ ಅಲ್ಗೋನ್‍ಕ್ವಿನ್ ಹೋಟೆಲ್‍ನಲ್ಲಿ ಕಳೆದ ವಾರ ವಾರ್ಷಿಕ ಕ್ಯಾಟ್ ಫ್ಯಾಷನ್ ಶೋ ನಡೆಯಿತು. ಈ ಪ್ರದರ್ಶನದಲ್ಲಿ ಮುದ್ದಾದ ಬೆಕ್ಕುಗಳ ಒನಪು-ವ್ಯಯಾರ ವೀಕ್ಷಿಸಲು ಸಾಕಷ್ಟು ಜನಜಂಗುಳಿಯೂ ಸೇರಿತ್ತು.  ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಉತ್ತೇಜನ ನೀಡುವ ಸಲುವಾಗಿ ಆಯೋಜಿಸಲಾಗಿದ್ದ ಬೆಕ್ಕುಗಳ ಸೌಂದರ್ಯ ಪ್ರದರ್ಶನವಿದು. ಇಲ್ಲಿ ಒಂದು ಡಜನ್ ಮುದ್ದಾದ ಮಾರ್ಜಾಲಗಳು ಕೆಂಪು ಹಾಸಿನ ಮೇಲೆ ವಿವಿಧ ವಿನ್ಯಾಸಗಳ ಲುಕ್‍ಗಳೊಂದಿಗೆ ಕ್ಯಾಟ್‍ವಾಕ್ ಮಾಡಿ ಚಕಿತಗೊಳಿಸಿದವು. ಸಭಿಕರು ಈ ಮಾರ್ಜಾಲ ರೂಪದರ್ಶಿಯರನ್ನು ಮೆವ್‍ಡೆಲ್ಸ್ ಎಂದು ಅಕ್ಕರೆಯಿಂದ ಕರೆದರು. ಇವು ಪರಿತ್ಯಕ್ತವಾಗಿದ್ದ ಮತ್ತು ಅಪಾಯದಲ್ಲಿ ರಕ್ಷಿಸಲ್ಪಟ್ಟ ಬೆಕ್ಕುಗಳು. ಬೀದಿ ಬೆಕ್ಕುಗಳನ್ನು ದತ್ತು ಪಡೆದು ಪೋಷಿಸುವಂತೆ ಮಾಡುವ ಉದ್ದೇಶದಿಂದ ಈ ಶೋ ಆಯೋಜಿಸಲಾಗಿತ್ತು. ಇವುಗಳು ಮನೆಗಳಿಗೆ ಭೂಷಣ ಎಂದು ಕ್ಯಾಟ್ ಒನರ್ ಮೆಲಾನೀ ಲೀ ಹೇಳುತ್ತಾರೆ. ಇವರು ಎರಡು ಬೆಕ್ಕುಗಳನ್ನು ರಕ್ಷಿಸಿ ದತ್ತು ಪಡೆದಿದ್ದಾರೆ.  ಇವುಗಳನ್ನು ಸಿಂಗರಿಸಿ ಪ್ಯಾಷನ್ ಶೋಗಾಗಿ ಕರೆತಂದಿದ್ದರು. ಈ ಶೋನಲ್ಲಿ ಭಾಗವಹಿಸಿದ್ದ ಬೆಕ್ಕುಗಳಿಗೆ ವಿಶೇಷ ವಸ್ತ್ರಗಳನ್ನು ವಿನ್ಯಾಸಗೊಳಿಸಲು ಫ್ಯಾಷನ್ ಡಿಸೈನರ್‍ಗಳನ್ನೂ ಸಹ ನಿಯೋಜಿಸಲಾಗಿತ್ತು.

DS-1

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin