ರಜತ ಗೆದ್ದ ಮುಸ್ಕಾನ್‍ಗೆ 75 ಲಕ್ಷ ಬಹುಮಾನ ಘೋಷಿಸಿದ ಮಧ್ಯಪ್ರದೇಶ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Muskan

ಭೋಪಾಲ್ (ಪಿಟಿಐ), ಆ.29- ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳಾ ಟೀಮ್ ಆರ್ಚರಿ ವಿಭಾಗದಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ತಮ್ಮ ರಾಜ್ಯದ ಮುಸ್ಕಾನ್ ಕಿರಾರ್ ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 75 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದ್ದಾರೆ.  ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಮುಸ್ಕಾನ್ ನಿನ್ನೆ ನಡೆದ ಟೀಮ್ ಆರ್ಚರಿ(ತಂಡ ಬಿಲ್ಲುಗಾರಿಕೆ) ಪಂದ್ಯದಲ್ಲಿ ರಜತ ಪದಕಕ್ಕೆ ಪಾತ್ರರಾಗಿದ್ದರು. ಇವರ ಸಾಧನೆಯನ್ನು ಕೊಂಡಾಡಿರುವ ಮುಖ್ಯಮಂತ್ರಿ ಇಂದು 75 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin