ಹುಲಿರಾಯನ ಸೆರೆಗಾಗಿ ಆನೆ ಮೂಲಕ ಕೂಂಬಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

eliphant-nagarahole
ಹುಣಸೂರು, ಆ.29- ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದಂಚಿನ ಕೆ.ಜಿ. ಹಬ್ಬನ ಕುಪ್ಪೆಯ ತರಗನ್ ಎಸ್ಟೇಟ್‍ನಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದ್ದು, ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡು ಪ್ರಾಣಿಗಳನ್ನು ಹುಲಿರಾಯ ಭಕ್ಷಿಸುತ್ತಿದ್ದಾನೆ. ಕಳೆದ 13 ದಿನಗಳಿಂದ ಹುಲಿ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು, ಎರಡು ಬಾರಿ ಕಾಣಿಸಿಕೊಂಡಿದೆ. ಇಟ್ಟಿರುವ ಬೋನ್ ಬಳಿ ಅಡ್ಡಾಡಿದರೂ ಬೋನಿಗೆ ಬಿದ್ದಿಲ್ಲ. ಹೀಗಾಗಿ ಮತ್ತೆ ಆನೆ ಮೂಲಕ ಕೂಂಬಿಂಗ್ ನಡೆಸುತ್ತಿದ್ದರೂ ಹುಲಿ ಮಾತ್ರ ಕಾಣಿಸಿಕೊಳ್ಳದೆ ಕಾಡು ಹಂದಿ ಬೇಟೆಯಲ್ಲಿ ನಿರತವಾಗಿದೆ.

ಹುಲಿಯು ಅಲ್ಲಲ್ಲಿ ಅಡ್ಡಾಡುತ್ತಿದ್ದು, ಹೆಜ್ಜೆ ಗುರುತುಗಳು ಸಾಮಾನ್ಯವಾಗಿದ್ದು, ಹುಲಿ ಯಾವಾಗ ಸೆರೆಯಾಗುವುದೋ ಎಂಬ ಆತಂಕ ಇಲಾಖೆ ಹಾಗೂ ಗ್ರಾಮಸ್ಥರದ್ದಾಗಿದೆ. ಕಾಣೆಯಾದ ಕರು: ಈ ನಡುವೆ ತರಗನ್ ಎಸ್ಟೇಟ್‍ನವರಿಗೆ ಸೇರಿದ ಎರಡು ವರ್ಷದ ಹೋರಿ ಕರು ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದು , ಹುಲಿಯೇ ಇದನ್ನು ಭೇಟೆಯಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Facebook Comments