ಗರ್ಲ್‍ಫ್ರೆಂಡ್ ರಾಖಿ ಕಟ್ತಾಳೆ ಅಂತ ಕಟ್ಟಡದಿಂದ ಜಿಗಿದ ವಿದ್ಯಾರ್ಥಿ..! ಮುಂದೇನಾಯ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Rakhi--01

ಅಗರ್ತಲಾ, ಆ.29-ಸಹೋದರ-ಸಹೋದರಿಯ ವಿಶಿಷ್ಟ ಸಂಬಂಧ ರಕ್ಷಾ ಬಂಧನ್ ಆಚರಣೆ ವೇಳೆ ಕೆಲವೊಂದು ಅಹಿತಕರ ಘಟನೆಗಳೂ ನಡೆಯುವುದುಂಟು. ತಾವು ಪ್ರೀತಿಸುವ ಹುಡುಗಿಯರು ರಾಖಿ ಕಟ್ಟಿ ತಮ್ಮನ್ನು ಸಹೋದರರಂತೆ ಪರಿಗಣಿಸುವುದನ್ನು ತಪ್ಪಿಸಿಕೊಳ್ಳಲು ಕೆಲವು ರೋಮಿಯೋಗಳು ಕಾಲೇಜ್‍ಗೆ ಚಕ್ಕರ್ ಹಾಕುವುದು ಅಥವಾ ಅವರ ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡುವುದು ಸಾಮಾನ್ಯ.  ಈಶಾನ್ಯ ರಾಜ್ಯ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ 18 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಗರ್ಲ್‍ಫ್ರೆಂಡ್ ರಾಖಿ ಕಟ್ಟುತ್ತಾಳೆ ಎಂದು ಹೆದರಿ ಶಾಲಾ ಕಟ್ಟಡದಿಂದ ಜಿಗಿದಿರುವ ಘಟನೆ ನಡೆದಿದೆ.

ಆಗಿದಿಷ್ಟು :
ವಿದ್ಯಾರ್ಥಿ ದಿಲೀಪ್ ಕುಮಾರ್ ಅದೇ ಶಾಲೆಯ ವಿದ್ಯಾರ್ಥಿನಿ ಜೊತೆ ಪ್ರೇಮ ಪಾಶಕ್ಕೆ ಸಿಲುಕಿದ್ದ. ಇವರಿಬ್ಬರ ಲವ್ ಕಹಾನಿ ಶಾಲೆಯಲ್ಲಿ ಜಗಜ್ಜಾಹೀರಾಗಿತ್ತು. ಇವರಿಬ್ಬರ ಒಡನಾಟ ಹೆಚ್ಚಾಗಿತ್ತು. ಇದು ಶಾಲೆಯ ಆಡಳಿತ ಮಂಡಳಿಗೆ ಕಿರಿಕಿರಿಯಾಗಿತ್ತು.  ರಕ್ಷಾ ಬಂಧನ್ ಮರು ದಿನ ದಿಲೀಪ್ ಕುಮಾರ್, ಆತನ ಗರ್ಲ್‍ಫ್ರೆಂಡ್ ಮತ್ತು ಅವರ ಪೋಷಕರನ್ನು ಶಾಲಾ ಮುಖ್ಯಸ್ಥರು ಕರೆದಿದ್ದರು. ಮುಖ್ಯೋಪಾಧ್ಯಾಯರ ಕೈಯಲ್ಲಿ ರಾಖಿ ಇತ್ತು. ದಿಲೀಪ್ ಮತ್ತು ಗರ್ಲ್‍ಫೆಂಡ್‍ನನ್ನು ಸಹೋದರ ಸಹೋದರಿಯನ್ನಾಗಿ ಮಾಡುವುದು ಇದರ ಉದ್ದೇಶವಾಗಿತ್ತು.

ಗರ್ಲ್‍ಫ್ರೆಂಡ್‍ಗೆ ರಾಖಿ ಕಟ್ಟಿ ಅಣ್ಣನೆಂದು ಪರಿಗಣಿಸಿ ಸಿಹಿ ತಿನಿಸುವಂತೆ ಶಾಲಾ ಮುಖ್ಯಸ್ಥರು ಒತ್ತಾಯಿಸಿದರು. ಆದರೆ ಇವರಿಬ್ಬರು ಅಣ್ಣ-ತಂಗಿಯಾಗಲು ಒಪ್ಪಲಿಲ್ಲ. ಆದರೆ ಶಾಲಾ ಆಡಳಿತ ಮಂಡಳಿ ಒತ್ತಾಯಿಸಿದಾಗ ಹೆದರಿದ ದಿಲೀಪ್ ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಹಾರಿದ. ಗಾಯಗೊಂಡಿರುವ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Facebook Comments

Sri Raghav

Admin