ಇಂಗ್ಲೆಂಡ್‍ನಲ್ಲಿ ದುಷ್ಕರ್ಮಿಗಳಿಂದ ಗುರುದ್ವಾರ ಬೆಂಕಿಗಾಹುತಿ

ಈ ಸುದ್ದಿಯನ್ನು ಶೇರ್ ಮಾಡಿ

Gurudvar
ಲಂಡನ್, ಆ.29-ವಿವಿಧ ರಾಷ್ಟ್ರಗಳಲ್ಲಿ ಸಿಖ್ ಸಮುದಾಯದ ಮೇಲೆ ಹಿಂಸಾಚಾರ ಮುಂದುವರಿಯುತ್ತಿರುವಾಗಲೇ, ಇಂಗ್ಲೆಂಡ್‍ನ ಲೀಥ್ ನಗರದಲ್ಲಿನ ಗುರುದ್ವಾರವೊಂದು ದುಷ್ಕರ್ಮಿಗಳ ದಾಳಿಯಿಂದ ಬೆಂಕಿಗಾಹುತಿಯಾಗಿದೆ. ಇದು ಜನಾಂಗೀಯ ದ್ವೇಷದಿಂದ ನಡೆದಿರಬಹುದಾದ ಕೃತ್ಯ ಎಂಬ ಶಂಕೆಯಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಕುಕೃತ್ಯದ ಬಗ್ಗೆ ಬ್ರಿಟನ್‍ನಲ್ಲಿರುವ ಸಿಖ್ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಕಾಟ್ಲೆಂಡ್‍ನ ಲೀಥ್ ಸಿಟಿಯಲ್ಲಿರುವ ಗುರು ನಾನಕ್ ಗುರುದ್ವಾರ ಸಾಹೀಬ್ ಮಂದಿರದ ಮೇಲೆ ದುಷ್ಕರ್ಮಿಗಳು ಮುಂಜಾನೆ 5 ಗಂಟೆಗೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಗುರುದ್ವಾರದ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಉದ್ದೇಶಪೂರ್ವ ದಾಳಿ ಇದಾಗಿದೆ ಎಂದು ತನಿಖೆ ನಡೆಸುತ್ತಿರುವ ಎಡಿನ್‍ಬರ್ಗ್ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

Facebook Comments

Sri Raghav

Admin