ಚಿಕಿತ್ಸೆಗಾಗಿ ಗೋವಾ ಸಿಎಂ ಪರಿಕ್ಕರ್ ಮತ್ತೊಮ್ಮೆ ಅಮೆರಿಕಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ (ಪಿಟಿಐ), ಆ.29-ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಂದು ರಾತ್ರಿ ಹೆಚ್ಚಿನ ವೈದ್ಯಕೀಯ ಉಪಚಾರಕ್ಕಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.  ಪ್ಯಾಂಕ್ರಿಯಾ(ಮೆದೋಜ್ಜಿರಕ) ಸಮಸ್ಯೆಯಿಂದ ಈಗಾಗಲೇ ಅಮೆರಿಕದಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದಿದ್ದ 62 ವರ್ಷದ ಪರಿಕ್ಕರ್ ಜೂನ್‍ನಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದರು.

ಈ ತಿಂಗಳ ಆರಂಭದಲ್ಲಿ ಅವರು ಮತ್ತೆ ಫಾಲೋ-ಅಪ್‍ಗಾಗಿ ಅಮೆರಿಕಕ್ಕೆ ತೆರಳಿದ್ದರು. ನಂತರ ಮತ್ತೆ ಭಾರತಕ್ಕೆ ಬಂದಿದ್ದ ಗೋವಾ ಸಿಎಂ, ಆಗಸ್ಟ್ 23ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ದಾಖಲಾಗಿದ್ದರು. ಇಂದು ಅವರು ಗೋವಾಗೆ ಹಿಂದಿರುಗಬೇಕಿತ್ತು. ಆದರೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಇಂದು ರಾತ್ರಿ ಅವರು ಮುಂಬೈನಿಂದ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಯವರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪರಿಕ್ಕರ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Parikkar

Facebook Comments

Sri Raghav

Admin