ಕೇರಳ ನೆರೆ ಸಂತ್ರಸ್ತರ ನೆರವಿಗೆ ನಿಂತಿದ್ದ ನಂದಮೂರಿ ಹರಿಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

Nadamuri-Harikrishna

ಹೈದರಾಬಾದ್ (ಪಿಟಿಐ), ಆ.29-ನನ್ನ ಜನ್ಮದಿನವನ್ನು ಈ ಬಾರಿ ಆಚರಿಸಬೇಡಿ. ಅದಕ್ಕಾಗಿ ಖರ್ಚು ಮಾಡುವ ಹಣವನ್ನು ಕೇರಳದ ಸಂತ್ರಸ್ತರಿಗೆ ಪರಿಹಾರವಾಗಿ ನೀಡಿ. ಆ ಮೂಲಕ ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣ ಮತ್ತು ಮಾನವೀಯತೆಯಿಂದ ಆಚರಿಸಿರಿ-ಎಂದು ಇಂದು ಅಪಘಾತದಲ್ಲಿ ದುರಂತ ಸಾವಿಗೀಡಾದ ಎನ್‍ಟಿಆರ್ ಪುತ್ರ, ನಟ-ನಿರ್ಮಾಪಕ ಹಾಗೂ ಟಿಡಿಪಿ ನಾಯಕ ನಂದಮೂರಿ ಹರಿಕೃಷ್ಣ ತಮ್ಮ ಅಪಾರ ಅಭಿಮಾನಿಗಳಿಗೆ ಸಲಹೆ ಮಾಡಿದ್ದರು.

ಸೆಪ್ಟೆಂಬರ್ 2ರಂದು ಹರಿಕೃಷ್ಣ ಅವರ 62ನೆ ಹುಟ್ಟುಹಬ್ಬ ಆಚರಣೆ ಇತ್ತು. ಸೋಮವಾರ ನಡೆಯಬೇಕಿದ್ದ ಅವರ ಜನ್ಮದಿನಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಭಿಮಾನಿಗಳು ಸಿದ್ದತೆ ನಡೆಸಿದ್ದರು. ನಾಲ್ಕು ದಿನಗಳ ಹಿಂದೆ ಅಭಿಮಾನಿ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದ ಹರಿಕೃಷ್ಣ, ಈ ಬಾರಿ ನನ್ನ ಜನ್ಮದಿನದ ಸಂಭ್ರಮ ಬೇಡ. ನಾನು ಈ ಸಲ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ. ಆ ಹಣವನ್ನು ಕೇರಳದ ಸಂತ್ರಸ್ತರಿಗೆ ಪರಿಹಾರವಾಗಿ ನೀಡುತ್ತೇನೆ.

Nandamuri-Harikrishna

ನೀವು ಕೂಡ ಇದನ್ನೇ ಅನುಸರಿಸಿ ಎಂದು ಅವರು ಸಲಹೆ ಮಾಡಿದ್ದರು. ಅವರ ಸಲಹೆಯನ್ನು ಪಾಲಿಸಿದ್ದ ಅಭಿಮಾನಿಗಳ ಸಮೂಹ ಕೇರಳ ಸಂತ್ರಸ್ತರಿಗಾಗಿ ದೇಣಿಗೆ ಮತ್ತು ಇತರ ಅಗತ್ಯ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿ ಅವರ ಜನ್ಮದಿನವಾದ ಸೆ.2ರಂದು ಸಮರ್ಪಿಸಲು ಸಿದ್ದರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೇರಳ ನೆರೆ ಸಂತ್ರಸ್ತರಿಗಾಗಿ ಮನ ಮಿಡಿದಿದ್ದ ಹರಿಕೃಷ್ಣ ದುರಂತ ಸಾವಿಗೀಡಾದರು.

Facebook Comments

Sri Raghav

Admin