ಸೋಷಿಯಲ್ ಮೀಡಿಯಾ ಮೂಲಕ ಸಮಾಜ ಸ್ವಾಸ್ಥ್ಯ ಕೆಡಿಸಬೇಡಿ : ಪ್ರಧಾನಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Modi

ನವದೆಹಲಿ (ಪಿಟಿಐ), ಆ.29-ಸೋಷಿಯಲ್ ಮೀಡಿಯಾ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸಲಹೆ ಮಾಡಿದ್ದಾರೆ.  ತಮ್ಮ ಲೋಕಸಭಾ ಕ್ಷೇತ್ರ ವಾರಾಣಾಸಿಯ ಬಿಜೆಪಿ ಕಾರ್ಯಕರ್ತರು ಮತ್ತು ಸ್ವಯಂಸೇವಕರೊಂದಿಗೆ ಇಂದು ಸಂವಾದ ನಡೆಸಿದ ಅವರು, ಕೊಳಕು ಸಂಗತಿಗಳನ್ನು ಹಬ್ಬಿಸಲು ಯಾರೊಬ್ಬರೂ ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು. ಈ ತಂತ್ರಜ್ಞಾನವನ್ನು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಬಳಸಬಾದರು. ಬದಲಿಗೆ ಸೋಷಿಯಲ್ ಮೀಡಿಯಾವನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಸುಳ್ಳು ವದಂತಿ ಮತ್ತು ನಕಲಿ ಸುದ್ದಿಗಳನ್ನು ಹಬ್ಬಿಸುವ ತಾಣವಾಗುತ್ತಿದೆ ಎಂದು ವಿಷಾದಿಸಿದ ಅವರು, ಇಂಥ ಸಂದೇಶಗಳಿಂದ ಸಮಾಜಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದು ಜನರಿಗೆ ಗೊತ್ತಾಗುವುದಿಲ್ಲ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪದಗಳನ್ನು ಬಳಸುತ್ತಾರೆ. ಇದು ಸಭ್ಯ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ ಎಂದು ಬೇಸರದಿಂದ ನುಡಿದರು.

ಮಹಿಳೆಯರನ್ನು ಗೌರವದಿಂದ ಕಾಣಬೇಕು. ಆದರೆ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಯಾವುದೇ ಕಾರಣಕ್ಕೂ ಒಪ್ಪತಕ್ಕ ಸಂಗತಿಯಲ್ಲ ಎಂದು ಅವರು ವಿಷಾದಿಸಿದರು.

Facebook Comments

Sri Raghav

Admin