ರಫೆಲ್‍ ವಿಚಾರವಾಗಿ ಪ್ರಧಾನಿ ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ ಸಿನ್ಹಾ

ಈ ಸುದ್ದಿಯನ್ನು ಶೇರ್ ಮಾಡಿ

Yashwant Sinha Modi

ಬೆಂಗಳೂರು,ಆ.29-ರಫೆಲ್‍ಯುದ್ಧ ವಿಮಾನ ಖರೀದಿ ವಿಚಾರದ ಬಗ್ಗೆ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೆಲ್ ಡೀಲ್ ಕುರಿತಂತೆ ಪ್ರಧಾನಿ ಅವರನ್ನು ಪ್ರಶ್ನಿಸಿ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದ ಯಾಕೆ ರದ್ದು ಮಾಡಿದ್ದೀರಿ, ಕ್ಯಾಬಿನೆಟ್‍ನ ಗಮನಕ್ಕೂ ತಾರದೆ ಈ ಡೀಲ್ ನಡೆಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಜವಾಬ್ದಾರಿಯಾಗುತ್ತಾರೆ ಎಂದಿದ್ದಾರೆ.

ಇದರ ಒಟ್ಟು ಖರ್ಚು ಎಷ್ಟು ಎನ್ನುವುದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದೇನೆ. ಮೇಕ್ ಇನ್ ಇಂಡಿಯ ಎಂದು ಹೇಳುವವರೇ ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಸರಿಯೇ? ಆ ಕಂಪನಿಯ ವಿರುದ್ದ ನಾನು ಮಾತನಾಡುವುದಿಲ್ಲ. ಏಕೆಂದರೆ 500 ಕೋಟಿ ಮಾನಹಾನಿ ಪ್ರಕರಣವನ್ನು ದಾಖಲು ಮಾಡಬಹುದಾಗಿದೆ. ಆದರೆ ಇದರಿಂದಾಗಿ ಎಚ್‍ಎಎಲ್‍ಗೆ ತುಂಬ ನಷ್ಟವಾಗಿದೆ ಎಂದರು.

ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪನಿಗೆ ಆಹ್ವಾನ ಕೊಟ್ಟಿದ್ದು ಏಕೆ, 20 ದಿನಗಳ ಹಿಂದಷ್ಟೆ ನೋಂದಣಿಯಾಗಿ ಅನುಭವವೇ ಇಲ್ಲದ ಕಂಪನಿಗೆ ಹೇಗೆ ಡೀಲ್ ಕೊಟ್ಟಿರಿ ಎಂದು ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿ ಏನನ್ನೂ ಮುಚ್ಚಿಡುವ ಪ್ರಮೇಯವೇ ಇಲ್ಲ. ಆ ದೇವರೆ ಕೇಂದ್ರ ಸರ್ಕಾರ ಇದು ಸೀಕ್ರೆಟ್ ವಿಚಾರ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ಇದರ ಹಿಂದೆ ಏನೇನು ನಡೆಯುತ್ತಿದೆ ಎಂದು.

ಇದರ ಲೈಫ್ ಟೈಮ್ ಕಾಸ್ಟ್ ಬಗ್ಗೆಯೂ ಕೇಂದ್ರ ಯಾವುದೇ ಮಾಹಿತಿಯೂ ನೀಡುತ್ತಿಲ್ಲ. ಇದು ಹೇಗೆ ರಹಸ್ಯವಾಯಿತು. ರಹಸ್ಯ ಮಾಡುವ ವಿಷಯವೂ ಇದಲ್ಲ. ಇದು ದೇಶದ ಜನತೆಗೆ ಗೊತ್ತಾಗಬೇಕು. ಕೂಡಲೇ ಇದಕ್ಕೆ ಉತ್ತರ ನೀಡಲಿ. ಈ ಆರೋಪದಲ್ಲಿ ಮೋದಿಯೊಬ್ಬರೇ ಭಾಗಿಯಾಗಿದ್ದಾರೆ. ಪ್ರಧಾನಿ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪರಿಕ್ಕರ್ ಹೇಳಿದ್ದರು. ಅಲ್ಲದೆ ಪ್ರಧಾನಿ ಮತ್ತು ಫ್ರಾನ್ಸ್‍ಅಧ್ಯಕ್ಷರ ನಡುವೆ ಈ ವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ.ಇದಕ್ಕೆ ಸಮಂಜಸ ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಜಂಟಿ ಸಂಸದೀಯ ಸಮಿತಿಯಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ರೂಲಿಂಗ್ ಪಾರ್ಟಿ ಅವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಫಲಿತಾಂಶ ಏನು ಬರುತ್ತೆ ಎನ್ನುವುದಾದರು ತಿಳಿದುಕೊಳ್ಳಬಹುದು.

Facebook Comments

Sri Raghav

Admin