ನಂದಮೂರಿ ಹರಿಕೃಷ್ಣ ಸಾವಿಗೆ ಶಿವಣ್ಣ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

Shivanna--01

ಬೆಂಗಳೂರು, ಆ.29- ತೆಲುಗು ಚಿತ್ರನಟ-ನಿರ್ಮಾಪಕ ಹಾಗೂ ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ಸಾವಿಗೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹರಿಕೃಷ್ಣ ಅವರು ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜಕೀಯ ಕ್ಷೇತ್ರ ಮತ್ತು ಸಮಾಜ ಸೇವೆಯಲ್ಲೂ ಅವರು ಹೆಸರು ಗಳಿಸಿದ್ದರು. ಅವರ ಸಾವಿನಿಂದ ತಮಗೆ ತುಂಬಾ ನೋವಾಗಿದೆ ಎಂದು ಶಿವರಾಜ್‍ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.  ಹರಿಕೃಷ್ಣ ಅವರ ನಿಧನದಿಂದ ಅವರ ಕುಟುಂಬವರ್ಗದವರಿಗೆ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Facebook Comments

Sri Raghav

Admin