ಮದುವೆ ಮನೆಯಲ್ಲಿ ಕಲುಷಿತ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Mrraige--01

ತುಮಕೂರು, ಆ.30-ನೆಂಟರಿಷ್ಟರ, ಬಂಧು-ಬಳಗದವರ ಆರೋಗ್ಯದ ದೃಷ್ಟಿಯಿಂದ ಮದುವೆ ಮನೆಯಲ್ಲಿ ಬಾಟಲಿ ನೀರು ತರಿಸಲಾಗುತ್ತದೆ. ಆ ನೀರೇ ಕಸ ಕಡ್ಡಿ, ಹುಳುಗಳಿಂದ ಕಲುಷಿತವಾಗಿದ್ದರೆ ಆ ನೀರನ್ನು ಕುಡಿಯುವುದಾದರೂ ಹೇಗೆ?  ನಗರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಮಾರಂಭಕ್ಕೆ ತರಿಸಲಾಗಿದ್ದು ಮಿನರಲ್ ವಾಟರ್ ಬಾಟಲಿಯಲ್ಲಿ ಕಲುಷಿತ ನೀರು ಕಂಡುಬಂದಿದ್ದು, ಇದನ್ನು ನೋಡಿದ ಅತಿಥಿಗಳು ಹೌಹಾರಿದ್ದಾರೆ.

ಬ್ಲೂ ಬ್ರಿಡ್ಜ್ ಎಂಬ ಹೆಸರಿನ ನೀರಿನ ಬಾಟಲಿಗಳನ್ನು ಸಮಾರಂಭಕ್ಕೆ ತರಿಸಲಾಗಿತ್ತು. ಇದರಲ್ಲಿ ಕೆಲವು ಬಾಕ್ಸ್‍ಗಳಲ್ಲಿದ್ದ ನೀರಿನ ಬಾಟಲಿಗಳು ಕಲುಷಿತಗೊಂಡಿದ್ದವು. ಇದನ್ನು ತಿಳಿಯದ ಕೆಲವು ಅತಿಥಿಗಳು ಅದೇ ನೀರನ್ನು ಕುಡಿದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕೆಲವರು ಕುಡಿಯುವ ನೀರು ಕಲುಷಿತಗೊಂಡಿದ್ದು , ಅದನ್ನು ಕುಡಿಯದಂತೆ ತಡೆದಿದ್ದಾರೆ.  ಕೂಡಲೇ ಅಡುಗೆ ಕೋಣೆಯಲ್ಲಿದ್ದ ನೀರಿನ ಬಾಟಲಿಗಳು ಪರಿಶೀಲಿಸಿದಾಗ ಕಲುಷಿತ ನೀರು ಬಾಟಲಿಗಳಲ್ಲಿರುವುದು ಪತ್ತೆಯಾಗಿದೆ.  ಕೂಡಲೇ ಮದುವೆ ಉಸ್ತುವಾರಿ ವಹಿಸಿದ್ದವರು ನೀರಿನ ಸರಬರಾಜು ಮಾಡಿದವರನ್ನು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin