15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದದಲ್ಲಿ ಬೌದ್ಧ ಸನ್ಯಾಸಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arested--01
ಬೋಧ್ ಗಯಾ (ಪಿಟಿಐ), ಆ.30-ಬಿಹಾರದ ಮುಜಾಫರ್‍ಪುರ್ ನಗರದ ಬಾಲಿಕಾಗೃಹದಲ್ಲಿ ಸುಮಾರು 30 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆದ ಪ್ರಕರಣದ ಆತಂಕಕಾರಿ ಸಂಗತಿಯ ನಡುವೆಯೇ ಮತ್ತೊಂದು ಲೈಂಗಿಕ ದುರಾಚಾರ ಘಟನೆ ಇದೇ ರಾಜ್ಯದಲ್ಲಿ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಭೋದ್ ಗಯಾದಲ್ಲಿನ ಬೌದ್ಧ ಶಾಲೆಯೊಂದರ 15ಕ್ಕೂ ಹೆಚ್ಚು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೌದ್ಧ ಸನ್ಯಾಸಿಯೊಬ್ಬನನ್ನು ಪೆÇಲೀಸರು ಬಂಧಿಸಿದ್ದಾರೆ. ಭೋದ್ ಗಯಾದ ಮಸ್ತಿಪುರ್ ಗ್ರಾಮದ ಪ್ರಸನ್ನ ಜ್ಯೋತಿ ಬುದ್ದಿಸ್ಟ್ ಸ್ಕೂಲ್ ಅಂಡ್ ಮೆಡಿಟೇಷನ್ ಸೆಂಟರ್‍ನಲ್ಲಿ ಈ ಲೈಂಗಿಕ ದುರಾಚಾರ ನಡೆದಿದೆ. ಇದನ್ನು ನಡೆಸುತ್ತಿದ್ದ ಮಾಲೀಕ ಮತ್ತು ಬೌದ್ಧ ಸನ್ಯಾಸಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈಶಾನ್ಯ ರಾಜ್ಯ ಅಸ್ಸಾಂನ ಅಂಗ್‍ಲಾಂಗ್ ಜಿಲ್ಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ವಾಸ್ಯಂಗ ಮಾಡುತ್ತಿದ್ದರು. ಇವರೆಲ್ಲ ಮೇಲೆ ಸನ್ಯಾಸಿ ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಸನ್ಯಾಸಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸಂತ್ರಸ್ತ ಬಾಲಕರನ್ನು ಮಹಿಳಾ ಪೆÇಲೀಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಬೌದ್ಧ ಗುರು ತಮ್ಮ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದರು. ಅಲ್ಲದೇ ನಮ್ಮೊಂದಿಗೆ ತುಂಬಾ ಕೆಟ್ಟದಾಗಿ(ಲೈಂಗಿಕ ದೌರ್ಜನ್ಯ) ನಡೆದುಕೊಳ್ಳುತ್ತಿದ್ದರು. ಅವರ ಮಾತನ್ನು ಕೇಳದಿದ್ದರೆ ಹೊಡೆಯುತ್ತಿದ್ದರು. ಅವರ ಕೆಟ್ಟ ವರ್ತನೆ ನಮ್ಮಲ್ಲಿ ತುಂಬಾ ಭಯಭೀತಿ ಮೂಡಿಸಿತ್ತು ಎಂದು ನೊಂದ ಬಾಲಕರು ವಿವರಿಸಿದ್ದಾರೆ.

Facebook Comments

Sri Raghav

Admin