ಇಂದಿನ ಪಂಚಾಗ ಮತ್ತು ರಾಶಿಫಲ (30-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಮನುಷ್ಯ ಜನ್ಮವೆಂಬ ದೋಣಿ ಸಿಕ್ಕಿರುವಾಗ, ದುಃಖದ ಮಹಾನದಿಯನ್ನು ದಾಟಿಬಿಡು. ಎಲೈ ಮೂಢ, ಇದು ನಿದ್ರಿಸುವ ಕಾಲವಲ್ಲ. ಈ ದೋಣಿ ಮತ್ತೆ ಸಿಗಲಾರದು. -ಬೋಧಿಚರ್ಯಾವತಾರ

Rashi
ಪಂಚಾಂಗ : 30.08.2018 ಗುರುವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ರಾ.09.20 / ಚಂದ್ರ ಅಸ್ತ ಬೆ.09.26
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ಥಿ (ರಾ.10.10) / ನಕ್ಷತ್ರ: ರೇವತಿ (ರಾ.08.01)
ಯೋಗ: ಗಂಡ (ರಾ.08.30) / ಕರಣ: ಭವ-ಬಾಲವ / (ಬೆ.09.58-ರಾ.10.10)
ಮಳೆ ನಕ್ಷತ್ರ: ಪೂರ್ವಫಲ್ಗುಣಿ (ರಾ.02.53 ಪ್ರವೇಶ) / ಮಾಸ: ಸಿಂಹ, ತೇದಿ: 14

ಇಂದಿನ ವಿಶೇಷ: ಸಂಕಷ್ಟಹರ ಚತುರ್ಥಿ ಗಣಪತಿ ವ್ರತ, ಸಾಯನ ವ್ಯತೀಪಾತ ಸಾ.05.44

# ರಾಶಿ ಭವಿಷ್ಯ
ಮೇಷ : ಸಂಶೋಧಕರು ಮತ್ತು ಬರಹಗಾರರಿಗೆ ಒಳ್ಳೆಯ ಕಾಲ. ಅವರ ಕೆಲಸಗಳಿಗೆ ಮನ್ನಣೆ ಸಿಗುವುದು
ವೃಷಭ : ಅನಿರೀಕ್ಷಿತ ಮೂಲಗಳಿಂದ ಧನಾಗಮನ ಆಗಲಿದೆ. ಸ್ನೇಹಿತರೊಂದಿಗೆ ತಾಳ್ಮೆಯಿಂದ ವರ್ತಿಸಿ
ಮಿಥುನ: ಆರೋಗ್ಯದ ವಿಚಾರವಾಗಿ ಹೆಚ್ಚು ಹಣ ಖರ್ಚು ಮಾಡುವ ಸಂದರ್ಭ ಬರಬಹುದು
ಕಟಕ : ಕೆಲವು ವಿಚಾರಗಳಲ್ಲಿ ನಿರಾಸೆ ಆಗಬಹುದು
ಸಿಂಹ: ಪ್ರಯತ್ನಗಳು ವಿಫಲವಾಗಬಹುದು, ಹಾಗಂತ ಹತಾಶರಾಗಬೇಡಿ
ಕನ್ಯಾ: ಫಲಾಫಲಗಳ ನಿರೀಕ್ಷೆ ಇಲ್ಲದೆ ನಿಮ್ಮ ಪ್ರಯತ್ನವನ್ನು ನೀವು ಮಾಡುತ್ತಿರಿ
ತುಲಾ: ಅಪರಿಚಿತ ವ್ಯಕ್ತಿ ಗಳೊಂದಿಗೆ ಸಲುಗೆ ಬೇಡ
ವೃಶ್ಚಿಕ: ತುಸು ಸಹನೆ ಕಳೆದುಕೊಂಡರೂ ಎಡವಟ್ಟು ಸಂಭವಿಸಬಹುದು. ದೂರ ಪ್ರಯಾಣ ಮಾಡದಿರಿ
ಧನುಸ್ಸು: ಮಹತ್ವದ ವ್ಯವಹಾರಗಳಲ್ಲಿ ಭಾಗಿಯಾಗದಿರಿ
ಮಕರ: ಬಣ್ಣದ ಮಾತುಗಳಿಗೆ ಮರುಳಾಗದಿರಿ
ಕುಂಭ: ನಿಮ್ಮ ತಾಳ್ಮೆ ಪರೀಕ್ಷೆಯ ಕಾಲ
ಮೀನ: ಸಣ್ಣದೊಂದು ಅಸಹನೆ ಶುರುವಾಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin