ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ಸಿಎಂ ಅಮೆರಿಕಕ್ಕೆ ಪಯಣ

ಈ ಸುದ್ದಿಯನ್ನು ಶೇರ್ ಮಾಡಿ

parikar
ಮುಂಬೈ/ಪಣಜಿ (ಪಿಟಿಐ), ಆ.30- ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೆಚ್ಚಿನ ವೈದ್ಯಕೀಯ ಉಪಚಾರಕ್ಕಾಗಿ ಇಂದು ಅಮೆರಿಕಕ್ಕೆ ತೆರಳಿದ್ಧಾರೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು 1.30ರ ನಸುಕಿನಲ್ಲಿ ಪರಿಕ್ಕರ್ ಏರ್ ಇಂಡಿಯಾ ವಿಮಾನದ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳಸಿದರು ಎಂದು ಮುಖ್ಯಮಂತ್ರಿ ಅವರ ಕಚೇರಿ(ಸಿಎಂಒ)ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಎಂಟು ದಿನಗಳ ಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದ ನಂತರ ಮನೋಹರ್ ಪರಿಕ್ಕರ್ ಗೋವಾಗೆ ಹಿಂದಿರುಗಲಿದ್ದಾರೆ.
ಪ್ಯಾಂಕ್ರಿಯಾ(ಮೆದೋಜ್ಜಿರಕ) ಸಮಸ್ಯೆಯಿಂದ ಈಗಾಗಲೇ ಅಮೆರಿಕದಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದಿದ್ದ 62 ವರ್ಷಗಳ ಪರಿಕ್ಕರ್ ಜೂನ್‍ನಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದರು.

ಈ ತಿಂಗಳ ಆರಂಭದಲ್ಲಿ ಅವರು ಮತ್ತೆ ಫಾಲೋ-ಅಪ್‍ಗಾಗಿ ಅಮೆರಿಕಕ್ಕೆ ತೆರಳಿದ್ದರು. ನಂತರ ಮತ್ತೆ ಭಾರತಕ್ಕೆ ಬಂದಿದ್ದ ಗೋವಾ ಸಿಎಂ, ಆಗಸ್ಟ್ 23ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ದಾಖಲಾಗಿದ್ದರು. ನಿನ್ನೆ ಅವರು ಗೋವಾಗಿ ಹಿಂದಿರುಗಬೇಕಿತ್ತು. ಆದರೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಇಂದು ಮುಂಜಾ ನೆ ಅವರು ಮುಂಬೈನಿಂದ ಅಮೆರಿಕಕ್ಕೆ ತೆರಳಿದ್ದಾರೆ.

Facebook Comments